ಅಮೆಜಾನ್ ಹೆಸರಿನಲ್ಲಿ ಹೂಡಿಕೆ: 11ಲಕ್ಷ ರೂ. ವಂಚನೆ

ಚಿಕ್ಕಬಳ್ಳಾಪುರ: ಅಮೆಜಾನ್ ಇ–ಕಾಮರ್ಸ್‌ ವಸ್ತುಗಳ ಮೇಲೆ ಹೂಡಿಕೆ ಮಾಡಿದರೆ ಉತ್ತಮ ಲಾಭ ದೊರೆಯುತ್ತದೆ ಎಂದು ನಂಬಿಸಿ ಆನ್‌ಲೈನ್ ವಂಚಕರು ತಾಲ್ಲೂಕಿನ ಹೊಸಹುಡ್ಯ ಗ್ರಾಮದ ಎನ್.ಮಹೇಶ್ ಅವರಿಗೆ ರೂ.11,71,313 ವಂಚಿಸಿದ್ದಾರೆ. ಈ ಸಂಬಂಧ ಮಹೇಶ್ ನಗರದ ಸೆನ್ ಪೊಲೀಸರಿಗೆ ದೂರು ನೀಡಿದ್ದಾರೆ. 

ಮಹೇಶ್ ಕೊರಿಯರ್ ಕಂಪನಿಯಲ್ಲಿ ಕೆಲಸ ಮಾಡುವರು. ‘ಮೊಬೈಲ್ ನಲ್ಲಿ ಹುಡುಕಾಟ ನಡೆಸಿದಾಗ ಟೆಲಿಗ್ರಾಂ ಸಾಮಾಜಿಕ ಜಾಲತಾಣದಲ್ಲಿ ವರ್ಕ್ ಫರ್ಮ್ ಹೋಮ್ ಎಂಬ ಅಮೆಜಾನ್ ಇ–ಕಾಮರ್ಸ್‌ನಲ್ಲಿ ವಸ್ತುಗಳ ಮೇಲೆ ಹೂಡಿಕೆ ಮಾಡಿದರೆ ಉತ್ತಮ ಲಾಭ ದೊರೆಯುತ್ತದೆ ಎಂದು ನಂಬಿ ಮೋಸ ಹೋಗಿದ್ದಾರೆ.   

ರೂ.500 ಹೂಡಿಕೆ ಮಾಡಿದೆ. ನಂತರ ಅದೇ ದಿನ ನನಗೆ ರೂ.5,396 ಅಸಲು ಮತ್ತು ಕಮಿಷನ್ ಖಾತೆಗೆ ವರ್ಗಾಯಿಸಿದರು. ನಂತರ ಮತ್ತಷ್ಟು ಹೂಡಿಕೆ ಮಾಡಿದೆ. ನನ್ನ ಖಾತೆಯಲ್ಲಿ ಹಣ ಇರುವಂತೆ ತೋರಿಸುತ್ತಿತ್ತು. ಆದರೆ ಡ್ರಾ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಒಮ್ಮೆಯೇ ಹಣ ಡ್ರಾ ಮಾಡೋಣ ಎಂದು ಸುಮ್ಮನಾದೆ. ನಂತರ ನನ್ನ ಸ್ನೇಹಿತರಿಗೆ ಹಣ ನೀಡಿ ಅವರ ಖಾತೆಗಳಿಂದ ಹಣ ಹೂಡಿಕೆ ಮಾಡಲು ಹುರಿದುಂಬಿಸಿದೆ.
ಹೀಗೆ ಒಟ್ಟು ರೂ.11,71,313 ಹೂಡಿಕೆ ಮಾಡಿದ್ದರು. ಅವರು ತಮ್ಮ ಖಾತೆ ಲಾಗಿನ್ ಮೂಲಕ ನೋಡಿದಾಗ ಅಸಲು ಮತ್ತು ಕಮಿಷನ್ ಸೇರಿ ರೂ.22,48,596 ಬಂದಂತೆ ತೋರಿಸುತ್ತಿತ್ತು. ಆದರೆ ಡ್ರಾ ಮಾಡಲು ಸಾಧ್ಯವಾಗಲಿಲ್ಲ. ಹಣ ಡ್ರಾ ಮಾಡಲು ಹೋದಾಗ ಶೇ 10ರಷ್ಟು ತೆರಿಗೆ, ಭದ್ರತಾ ಹಣ ಎಂದು ರೂ. 45 ಸಾವಿರ ಕಟ್ಟಬೇಕು ಎಂದು ತೋರಿಸುತ್ತಿದೆ. ಕಮಿಷನ್ ಬರುತ್ತದೆ ಎಂದು ನಂಬಿಸಿ ನನಗೆ ವಂಚಿಸಿರುವವರ ವಿರುದ್ಧ ಕ್ರಮ ಜರುಗಿಸಿ ಎಂದು ದೂರಿನಲ್ಲಿ ಕೋರಿದ್ದಾರೆ.

Leave a Reply

Your email address will not be published. Required fields are marked *

error: Content is protected !!