ಉಡುಪಿ: ಜಿಲ್ಲೆಯ ವಿವಿಧೆಡೆ ಅ.18 ರಂದು ವಿದ್ಯುತ್ ವ್ಯತ್ಯಯ
ಉಡುಪಿ, ಅ.15 : ಜಿಲ್ಲೆಯ ಈ ಕೆಳಕಂಡ ಪ್ರದೇಶಗಳಲ್ಲಿ ಅಕ್ಟೋಬರ್ 18 ರಂದು ವಿದ್ಯುತ್ ಸರಬರಾಜಿನಲ್ಲಿ
ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.
110 ಕೆವಿ ಬೆಳ್ಮಣ್ ವಿದ್ಯುತ್ ಉಪಕೇಂದ್ರದಿ0ದ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿ0ದ ಸದರಿ ವಿದ್ಯುತ್ ಉಪಕೇಂದ್ರದಿ0ದ ಹೊರಡುವ 11ಕೆವಿ ಫೀಡರ್ ಗಳಾದ ಸೂಡ, ನಂದಳಿಕೆ ಮತ್ತು ಬೆಳ್ಮಣ್ ಫೀಡರ್‌ಗಳ ಬೆಳ್ಮಣ್, ನಂದಳಿಕೆ, ಜಂತ್ರ, ಕೆದಿಂಜೆ, ಮಾವಿನಕಟ್ಟೆ, ಸೂಡ, ಸಕ್ಕೇರಿಬೈಲು, ದೇಂದೊಟ್ಟು ಪದವು, ಕೊರಜೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಹೆಬ್ರಿ ಉಪವಿದ್ಯುತ್ ಸ್ಥಾವರದಿಂದ ಹೊರಡುವ 11 ಕೆವಿ ಹೆಬ್ರಿ, ಮುದ್ರಾಡಿ, ಶಿವಪುರ ಮತ್ತು ಚಾರ ಮಾರ್ಗದ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿAದ ಚಾರ, ಸಂತೆಕಟ್ಟೆ, ಕರ್ಜೆ, ಮಂಡಾಡಿಜೆಡ್ಡು, ಕುರ್ಪಾಡಿ, ಶಿವಪುರ, ಕನ್ಯಾನ, ಹೆಬ್ರಿ, ಮುದ್ರಾಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
220 ಕೆ.ವಿ ಸ್ವೀಕರಣಾ ಕೇಂದ್ರ ಹೆಗ್ಗುಂಜೆಯಲ್ಲಿ 110/11 ಕೆ.ವಿ 10 ಎಂ.ವಿ.ಎ ಶಕ್ತಿ ಪರಿವರ್ತಕದ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿ0ದ 220/110/11 ಕೆ.ವಿ ಹೆಗ್ಗುಂಜೆ ವಿದ್ಯುತ್ ಉಪಕೇಂದ್ರದಿ0ದ ಹೊರಡುವ 11 ಕೆ.ವಿ ವಂಡಾರು ಫೀಡರ್‌ಗಳ ಶಿರೂರು ಮೂರುಕೈ, ಮಣಿಕಲ್, ಅರಾಡಿ, ವಂಡಾರು, ಆವರ್ಸೆ ಮತ್ತು ಕಕ್ಕುಂಜೆ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
110/33/11 ಕೆವಿ ಮಣಿಪಾಲ ವಿದ್ಯುತ್ ಉಪಕೇಂದ್ರದಿOದ ಹೊರಡುವ 11 ಕೆವಿ ಮೂಡುಬೆಳ್ಳೆ, ಇಂಡಸ್ಟ್ರಿಯಲ್ ಏರಿಯಾ ಹಾಗೂ ಇಂದ್ರಾಳಿ ಫೀಡರಿನಲ್ಲಿ ಮೆಂಟೆನೆನ್ಸ್ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿOದ ಮಣಿಪುರ, ಮೂಡುಬೆಳ್ಳೆ, ಮರ್ಣೆ, ಕಟ್ಟಿಂಗೇರಿ, ಕೆಮ್ತೂರು, ಶಿವಳ್ಳಿ ಇಂಡಸ್ಟ್ರಿಯಲ್ ಏರಿಯಾ, ಹಯಗ್ರೀವನಗರ, ಲಕ್ಷ್ಮೀಂದ್ರ ನಗರ, ಇಂದ್ರಾಳಿ, ರೈಲ್ವೆ ನಿಲ್ದಾಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
110/11 ಕೆವಿ ಬ್ರಹ್ಮಾವರ ಉಪವಿದ್ಯುತ್ ಕೇಂದ್ರದಿ0ದ ಹೊರಡುವ 11 ಕೆವಿ ಚಾಂತಾರು, ಉಪ್ಪೂರು, ಚೇರ್ಕಾಡಿ, ಕೊಕ್ಕರ್ಣೆ ಹಾಗೂ 110/11ಕೆವಿ ನಿಟ್ಟೂರು ಉಪವಿದ್ಯುತ್ ಕೇಂದ್ರದಿOದ ಹೊರಡುವ 11 ಕೆವಿ ಕಲ್ಯಾಣಪುರ ಫೀಡರಿನಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿ0ದ ಅಗ್ರಹಾರ, ನಂದಿಗುಡ್ಡೆ, ಕೊಳಂಬೆ, ತೊಂಬಟ್ಟುಕೆರೆ, ಶ್ರೀ ಕೃಷ್ಣ ಫೌಲ್ಟ್ರಿಫಾರ್ಮ್, ಉಪ್ಪೂರು, ಮಾಯಾಡಿ, ಸಾಲ್ಮರ, ಕುದ್ರುಬೆಟ್ಟು, ಕೆ.ಜಿ ರೋಡ್, ಕೋಟೆ ರೋಡ್, ನಿಡಂಬಳ್ಳಿ, ಕಲ್ಯಾಣಪುರ, ಹೇರೂರು, ಚಾಂತಾರು, ಕುಂಜಾಲು, ಆರೂರು, ಚೇರ್ಕಾಡಿ, ಹಲುವಳ್ಳಿ, ಪಡುನೀಲಾವರ, ಎಳ್ಳಂಪಳ್ಳಿ, ತಡೆಕಲ್ಲು, ಪ್ರಗತಿನಗರ, ಜಾರ್ಜೆಡ್ಡು, ಗಣೇಶ್ ಕಲಾಮಂದಿರ, ಕೆ.ಕೆ. ಫಾರ್ಮ್ಸ್, ಹೊಸಾಳ, ಕಚ್ಚೂರು, ರಂಗನಕೆರೆ, ಹೇರಾಡಿ, ಹನೆಹಳ್ಳಿ, ಕೂರಾಡಿ, ನಡೂರು, ಬೆಣ್ಣೆಕುದ್ರು, ಸಂತೆಕಟ್ಟೆ, ನೇಜಾರು, ಮೂಡುತೋನ್ಸೆ, ಕೋಡಿಬೆಂಗ್ರೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 9.30 ರಿಂದ ಸಂಜೆ 5.30 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
220 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರ ಹೆಗ್ಗುಂಜೆಯಲ್ಲಿ 110/11ಕೆವಿ 10ಎಂ.ವಿ.ಎ ಶಕ್ತಿ ಪರಿವರ್ತಕದ ನಿರ್ವಹಣೆಯ ಕಾಮಗಾರಿ ಹಮ್ಮಿಕೊಂಡಿರುವುದರಿOದ ಸದರಿ ಉಪಕೇಂದ್ರದಿ0ದ ಹೊರಡುವ 11 ಕೆವಿ ಹೆಗ್ಗುಂಜೆ ಮತ್ತು ನಂಚಾರು ಫೀಡರಿನಲ್ಲಿ ಹೆಗ್ಗುಂಜೆ, ಕಾಡೂರು, ಪೆಜಮಂಗೂರು, ಕೊಕ್ಕರ್ಣೆ, ಕೆಂಜೂರು, ಶಿರೂರು, ಹಿಲಿಯಾಣ, ನಂಚಾರು, ಮುದ್ದೂರು, ಕಜ್ಕೆ, ಮಂದಾರ್ತಿ, ತಂತ್ರಾಡಿ, ನಡೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
110/33/11 ಕೆವಿ ಹಿರಿಯಡ್ಕ ವಿದ್ಯುತ್ ಉಪಕೇಂದ್ರದಿ0ದ ಹೊರಡುವ 11 ಕೆವಿ ಪೆರ್ಡೂರು ಫೀಡರಿನಲ್ಲಿ ಮೆಂಟೆನೆನ್ಸ್ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿOದ ಪುತ್ತಿಗೆ, ಪಕ್ಕಾಲು, ಪೆರ್ಡೂರು ಪೇಟೆ, ಮುತ್ತೂರ್ಮೆ, ಕುಕ್ಕೆಹಳ್ಳಿ, ಪಾಡಿಗಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಸಂಬOಧಪಟ್ಟ ಗ್ರಾಹಕರು ಮೆಸ್ಕಾಂನೊOದಿಗೆ ಸಹಕರಿಸುವಂತೆ ಪ್ರಕಟಣೆ ತಿಳಿಸಿದೆ.