ಕೋವಿಡ್’ಗೂ ಮೊದಲು ವೈದ್ಯಕೀಯ ಕ್ಷೇತ್ರ ಇಷ್ಟೊಂದು ಅನಿವಾರ್ಯ ಅಂದುಕೊಂಡಿರಲಿಲ್ಲ- ಶೋಭಾ ಕರಂದ್ಲಾಜೆ

ಉಡುಪಿ ಅ.14 (ಉಡುಪಿ ಟೈಮ್ಸ್ ವರದಿ): ನಗರದ ಡಯಾನ ಸರ್ಕಲ್ ಸಮೀಪದ ಕಲ್ಪನಾ ರೆಸಿಡೆನ್ಸಿ ಕಟ್ಟಡದಲ್ಲಿ ನೂತನವಾಗಿ ಆರಂಭಗೊಂಡಿರುವ “ದಿಶಾ ಸರ್ಜಿಕಲ್ ಆಂಡ್ ಲೈಫ್ ಕೇರ್” ಇಂದು ಉದ್ಘಾಟನೆಗೊಂಡಿತು.

ದಿಶಾ ಸರ್ಜಿಕಲ್ ಆಂಡ್ ಲೈಫ್ ಕೇರ್ ನ ನೂತನ ಮಳಿಗೆಯನ್ನು ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕೋವಿಡ್ ಹಾವಳಿಗೂ ಮೊದಲು ವೈದ್ಯಕೀಯ ಕ್ಷೇತ್ರ ಇಷ್ಟೊಂದು ಅನಿವಾರ್ಯ ಎಂದು ಅಂದುಕೊಂಡಿರಲಿಲ್ಲ. ಭಾರತದ ಬಹುತೇಕ ಜನರಿಗೆ ಮಾಸ್ಕ್ ನ ಬಗ್ಗೆ ತಿಳಿದಿರಲಿಕ್ಕಿಲ್ಲ. ನಾವೆಲ್ಲಾ ಮಾಸ್ಕ್ ಎಂದರೆ ಬರೇ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ಸಮಯದಲ್ಲಿ ವೈದ್ಯರು ಹಾಕುವುದು ನೋಡಿದ್ದೆವು. ಆದರೆ ಕೊರೋನಾ ಜೀವನದ ಪಾಠ, ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವಂತಹ ಬಹಳ ದೊಡ್ಡ ಪಾಠ ಕಲಿಸಿತ್ತು.

ಮಾತ್ರವಲ್ಲದೆ ಸರಕಾರಕ್ಕೂ ಬಹಳಷ್ಟು ಪಾಠಗಳನ್ನು ಕೊರೋನಾ ಕಲಿಸಿತ್ತು. ಕೋವಿಡ್ ಆರಂಭದಲ್ಲಿ ನಮ್ಮಲ್ಲಿ ಮಾಸ್ಕ್, ವೆಂಟಿಲೇಟರ್, ಐಸಿಯು ಗಳು ಕಡಿಮೆ ಇದ್ದವು, ಇಂತಹ ಅನೇಕ ವಿಚಾರಗಳು ಭಾರತದಲ್ಲಿ ಇರಲಲ್ಲಿ. ಕಾರಣ ನಾವು ಅದಕ್ಕೆಲ್ಲಾ ಹೆಚ್ಚಿನ ಪ್ರಾಮುಖ್ಯತೆ ನೀಡಿರಲಿಲ್ಲ ಎಂದರು.

ಹಾಗೂ ಭಾರತದಲ್ಲಿ ಬಹುತೇಕ ಮಂದಿ ಆರೋಗ್ಯ ಮತ್ತು ವಿದ್ಯೆಯನ್ನು ಉದ್ಯಮ ಎಂದು ಪರಿಗಣಿಸಿಲ್ಲ. ಆಸ್ಪತ್ರೆಗಳು ಕೂಡಾ ಉದ್ಯಮ ಕೇಂದ್ರಗಳಾಗಿ ಮಾರ್ಪಟ್ಟಿದೆ ಎಂದು ಕೆಲವೊಮ್ಮೆ ಅನ್ನಿಸುತ್ತದೆ ಆದರೆ ನಮ್ಮ ಉಡುಪಿ ಜಿಲ್ಲೆಯಂತಹ ಆಸ್ಪತ್ರೆಯಲ್ಲಿ ಮಾನವೀಯ ಗುಣಗಳು ಇಂದಿಗೂ ಉಳಿದುಕೊಂಡಿದೆ. ಇಂತಹ ಉತ್ತಮ ಸೇವೆಗಳ ಜೊತೆಗೆ ವೈದ್ಯಕೀಯ ಅಗತ್ಯ ಪರಿಕರಣಗಳನ್ನು ಪೂರೈಸುವ ಕೆಲಸವನ್ನು ಸಂಸ್ಥೆಯ ಪ್ರವರ್ತಕರಾದ ಭರತ್ ಶೆಟ್ಟಿ ಅವರು ಮಾಡುತ್ತಿದ್ದಾರೆ. ಆಸ್ಪತ್ರೆಗಳಿಗೆ ಬೇಕಾದ ವೈದ್ಯಕೀಯ ಪರಿಕರಗಳನ್ನು ನೀಡುವ ಪ್ರಯತ್ನ ಅವರು ಮಾಡುತ್ತಿದ್ದಾರೆ. ಅಗತ್ಯವಿರುವವರು ಇದರ ಪ್ರಯೋಜನ ಪಡೆದುಕೊಳ್ಳುವಂತಾಗಲಿ ಎಂದು ಸಂಸ್ಥೆಗೆ ಶುಭ ಹಾರೈಸಿದರು.

ಈ ವೇಳೆ ಕರ್ಲಾನ್ ಲಿಮಿಟೆಡ್ ಇದರ ವ್ಯವಸ್ಥಾಪಕ ನಿರ್ದೇಶಕ ಟಿ.ಸುಧಾಕರ್ ಪೈ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಈ ಸಂದರ್ಭದಲ್ಲಿ ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಇದರ ಅಧ್ಯಕ್ಷ ಕೆ.ಉದಯ್ ಕುಮಾರ್ ಶೆಟ್ಟಿ, ಆದರ್ಶ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಜಿ.ಎಸ್ ಚಂದ್ರಶೇಖರ್, ಹೈಟೆಕ್ ಮೆಡಿಕೇರ್ ಆಸ್ಪತ್ರೆಯ ಅಧ್ಯಕ್ಷ ಡಾ. ಟಿ.ಎಸ್ ರಾವ್, ನಗರ ಸಭಾ ಸದಸ್ಯೆ ಮಾನಸ ಸಿ.ಪೈ, ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಉದ್ಯಮಿ ಸಕರಾಮ್ ಶೆಟ್ಟಿ, ಗೀತಾಂಜಲಿ ಸುವರ್ಣ ಪ್ರವರ್ತಕರಾದ ಭರತ್ ಶೆಟ್ಟಿ, ಪಾಲುದಾರರಾದ ಗೋಪಾಲ ಕೃಷ್ಣ ಶೆಟ್ಟಿ, ಜಯ ಅಮೀನ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!