ಮತ್ತೆ 40% ಕಮಿಷನ್ ಚರ್ಚೆಗೆ ಕಾರಣವಾಯ್ತು ಕುಸಿದ ಕಲ್ಲಡ್ಕ ಮೇಲ್ಸೇತುವೆಯ ಪಿಲ್ಲರ್
ಬಂಟ್ವಾಳ, ಅ.13 : ತಾಲೂಕಿನ ಕಲ್ಲಡ್ಕದಲ್ಲಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿಯ ನಿರ್ಮಾಣ ಹಂತದಲ್ಲೇ ಪಿಲ್ಲರ್ ವೊಂದು ಕುಸಿದು ಬಿದ್ದಿರುವ ಘಟನೆ ಇಂದು ನಡೆದಿದೆ.
ಬಿ.ಸಿ.ರೋಡ್ – ಹಾಸನ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿಯ ಫೈ ಓವರ್ ಗಾಗಿ ಪಿಲ್ಲರ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಪಿಲ್ಲರ್ ನಿರ್ಮಾಣಕ್ಕಾಗಿ ಕಬ್ಬಿಣದ ರಾಡ್ ಗಳನ್ನು ಜೋಡಿಸುವ ಕಾರ್ಯ ನಡೆಯುತ್ತಿತ್ತು. ಈ ವೇಳೆ ಜೋಡಿಸಿದ್ದ ಕಬ್ಬಿಣದ ರಾಡ್ ಗಳು ಸಂಪೂರ್ಣವಾಗಿ ರಸ್ತೆಗೆ ಕುಸಿದು ಬಿದ್ದಿದೆ. ಬೀಳುವ ಸಂದರ್ಭದಲ್ಲಿ ಸ್ಥಳದಲ್ಲಿ ಯಾವುದೇ ವಾಹನಗಳ ಸಂಚಾರ ಇಲ್ಲದಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.
ಈಗಾಗಲೇ ರಾಜ್ಯದಲ್ಲಿ 40 ಪರ್ಸೆಂಟ್ ಕಮಿಷನ್ ಬಗ್ಗೆ ಆರೋಪಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಈ ಮೇಲ್ಸೇತುವೆ ಕಾಮಗಾರಿಯ ವೇಳೆಯೇ ಪಿಲ್ಲರ್ ಕುಸಿರುವುದುದು ಭಾರೀ ಚರ್ಚೆಗೆ ಕಾರಣವಾಗಿದೆ. ಅಲ್ಲದೆ ಸಾರ್ವಜನಿಕ ವಲಯದಲ್ಲಿ ಮತ್ತೆ 40 ಪರ್ಸೆಂಟ್ ಕಮಿಷನ್ ಬಗ್ಗೆ ಚರ್ಚೆ ನಡೆಯುವುತ್ತಿರುವುದು ಕೇಳಿ ಬಂದಿದೆ.