ಉಡುಪಿ: ವಿಚ್ಚೇದನ ನೀಡುವಂತೆ ಪತಿ ಮಾನಸಿಕ ಕಿರುಕುಳ- ಪತ್ನಿಯಿಂದ ದೂರು
ಉಡುಪಿ ಅ.13 (ಉಡುಪಿ ಟೈಮ್ಸ್ ವರದಿ): ವಿಚ್ಚೇದನ ನೀಡುವಂತೆ ಒತ್ತಾಯಿಸಿ ಮಾನಸಿಕ ಕಿರುಕುಳ ನೀಡುತ್ತಿರುವುದಾಗಿ ಉಡುಪಿಯ ಕುಕ್ಕಿಕಟ್ಟೆ ನಿವಾಸಿ ಕುಶಾಲಾಕ್ಷಿ ಅವರು ತಮ್ಮ ಪತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಕುಶಾಲಾಕ್ಷಿ ಅವರಿಗೆ ಅವರ ಪತಿ ಸತೀಶ್ ಬಿ.ಎಸ್ ನು ವಿಚ್ಛೇದನ ನೀಡುವಂತೆ ಮಾನಸಿಕ ಕಿರುಕುಳ ನೀಡುತ್ತಿದ್ದಾನೆ. ಅಲ್ಲದೆ ತಮ್ಮ ಮಗನ ಎದುರೇ ಅವಾಚ್ಯ ಶಬ್ದಗಳಿಂದ ಬೈದು ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನಂತೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.