ಎಬಿ ಜನರಲ್ ಎಲೆಕ್ಟೊರಲ್ ಟ್ರಸ್ಟ್’ ನಿಂದ 10 ಕೋಟಿ ರೂ. ಬಿಜೆಪಿಗೆ ದೇಣಿಗೆ
ಹೊಸದಿಲ್ಲಿ ಅ.5: 2021-22ನೇ ಹಣಕಾಸು ವರ್ಷದಲ್ಲಿ ಮುಂಬೈ ಮೂಲದ ಎಬಿ ಜನರಲ್ ಎಲೆಕ್ಟೊರಲ್ ಟ್ರಸ್ಟ್ 10 ಕೋಟಿ ರೂಪಾಯಿ ದೇಣಿಗೆಯನ್ನು ಬಿಜೆಪಿಗೆ ನೀಡಿದೆ ಎಂದು ಚುನಾವಣಾ ಆಯೋಗ ಹೇಳಿದೆ
ಈ ಬಗ್ಗೆ ಪ್ರಕಟಗೊಂಡಿರುವ ಮಾಧ್ಯಮ ವರದಿ ಪ್ರಕಾರ, ಹಿಂಡಲ್ಕೊ ಇಂಡಸ್ಟ್ರೀಸ್ ಲಿಮಿಟೆಡ್ ನಿಂದ ತಲಾ ಐದು ಕೋಟಿ ರೂಪಾಯಿಗಳ ಎರಡು ಕಂತನ್ನು ಟ್ರಸ್ಟ್ ಪಡೆದಿದ್ದು, ಆ ಮೊತ್ತವನ್ನು ಬಿಜೆಪಿಗೆ 5 ಕೋಟಿ ರೂಪಾಯಿಗಳ ಎರಡು ಕಂತುಗಳಲ್ಲಿ ನೀಡಿರುವ ಅಂಶ ದೃಢಪಟ್ಟಿದೆ. ಹಾಗೂ ಚೆನ್ನೈ ಮೂಲದ ಟ್ರಿಯಫ್ ಎಲೆಕ್ಟೊರಲ್ ಟ್ರಸ್ಟ್ ಟ್ಯೂಬ್ ಇನ್‍ವೆಸ್ಟ್ ಮೆಂಟ್ಸ್ ಆಫ್ ಇಂಡಿಯಾ ಲಿಮಿಟೆಡ್ ನಿಂದ 50 ಲಕ್ಷ ರೂಪಾಯಿ ದೇಣಿಗೆ ಪಡೆದು, ಮೊತ್ತವನ್ನು ದ್ರಾವಿಡ ಮುನ್ನೇತ್ರ ಕಝಗಂಗೆ ವರ್ಗಾಯಿಸಿದೆ. ಉಭಯ ಟ್ರಸ್ಟ್ ಗಳು ತಮ್ಮ ದೇಣಿಗೆ ಬಗೆಗಿನ ವಾರ್ಷಿಕ ಹೇಳಿಕೆಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದು ತಿಳಿದು ಬಂದಿದೆ.
ಇನ್ನು ಎಲೆಕ್ಟೊರಲ್ ಟ್ರಸ್ಟ್‍ಗಳು ಲಾಭರಹಿತ ಸಂಸ್ಥೆಗಳಾಗಿದ್ದು, ಸಾರ್ವಜನಿಕರು ಅಥವಾ ಕಂಪನಿಗಳಿಂದ ದೇಣಿಗೆಯನ್ನು ಸ್ವೀಕರಿಸಿ ರಾಜಕೀಯ ಪಕ್ಷಗಳಿಗೆ ವರ್ಗಾಯಿಸುವ ಸಂಸ್ಥೆಗಳಾಗಿವೆ. ಈ ಟ್ರಸ್ಟ್‍ಗಳಿಗೆ ತೆರಿಗೆ ವಿನಾಯಿತಿ ಇರುತ್ತದೆ ಎಂಬ ಮಾಹಿತಿಯೂ ಲಭ್ಯವಾಗಿದೆ.