ಎಲ್.ಇ.ಡಿ ಟಿವಿ ಸ್ಫೋಟ- ಬಾಲಕ ಮೃತ್ಯು
ಗಾಝಿಯಾಬಾದ್ ಅ.5: ಉತ್ತರ ಪ್ರದೇಶದ ಗಾಝಿಯಾಬಾದ್ ನಲ್ಲಿ ಎಲ್.ಇ.ಡಿ ಟಿವಿ ಸ್ಫೋಟಗೊಂಡು ಹದಿನಾರು ವರ್ಷದ ಬಾಲಕನೋರ್ವ ಮೃತಪಟ್ಟ ಘಟನೆ ನಡೆದಿದೆ.
ಸ್ಥಳೀಯ ನಿವಾಸಿ ಬಾಲಕ ಓಮೇಂದ್ರ(16) ಮೃತಪಟ್ಟವರು.
ಟಿವಿ ಸ್ಪೋಟಗೊಂಡ ಪರಿಣಾಮ ಅದರ ಚೂರುಗಳು ಬಾಲಕನ ಮುಖ, ಎದೆ, ಕುತ್ತಿಗೆಗೆ ತಾಗಿ ಗಾಯವಾಗಿತ್ತು. ಇದರಿಂದ ಗಂಭೀರ ಗಾಯಗೊಂಡ ಬಾಲಕ ಓಮೇಂದ್ರ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮೃತ ಬಾಲಕನ ತಾಯಿ, ಅತ್ತಿಗೆ ಹಾಗೂ ಸ್ನೇಹಿತ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಟಿವಿ ಸ್ಫೋಟಗೊಂಡಾಗ ಒಮೇಂದ್ರ, ಆತನ ತಾಯಿ, ಅತ್ತಿಗೆ ಹಾಗೂ ಆತನ ಸ್ನೇಹಿತ ಕರಣ್ ಆ ಕೊಠಡಿಯಲ್ಲಿದ್ದರು. ಹಾಗೂ ಪಕ್ಕದ ಮತ್ತೊಂದು ಕೊಠಡಿಯಲ್ಲಿದ್ದ ಮೋನಿಕಾ ಅವರು ಘಟನೆಯ ಬಗ್ಗೆ ಮಾಹಿತಿ ನೀಡಿ, “ಸ್ಫೋಟ ಶಕ್ತಿಶಾಲಿಯಾಗಿತ್ತು ಹಾಗೂ ಇಡೀ ಮನೆ ಕಂಪಿಸಿತು. ಗೊಡೆಗಳು ಭಾಗಶಃ ಕುಸಿದವು” ಎಂದು ತಿಳಿಸಿದ್ದಾರೆ.
ಟಿವಿಯ ಸ್ಪೋಟದ ತೀವ್ರತೆಗೆ ಕಾಂಕ್ರೀಟ್ ಸ್ಲ್ಯಾಬ್ ಹಾಗೂ ಗೋಡೆಯ ಒಂದು ಭಾಗ ಕುಸಿದಿದೆ. ಇದು ಸ್ಥಳೀಯರಲ್ಲಿ ಆತಂಕದ ವಾತಾವರಣ ಸೃಷ್ಟಿಸಿತು. ಅಲ್ಲದೆ ಮನೆಯಲ್ಲಿ ಸ್ಪೋಟದ ಸದ್ದು ಕೇಳಿ “ಅಡುಗೆ ಸಿಲಿಂಡರ್ ಒಡೆದಿರಬೇಕು ಎಂದುಕೊಂಡಿದ್ದು, ಎಲ್ಲರೂ ಹೊರಕ್ಕೆ ಓಡಿ ಬಂದೆವು ಎಂದು ಸ್ಥಳೀಯರು ತಿಳಿಸಿದ್ದಾರೆ.