ಉಡುಪಿ: ಜಿಲ್ಲಾಧಿಕಾರಿ ವಿರುದ್ದ ಕ್ರಮಕ್ಕೆ ಪ್ರಮೋದ್ ಮಧ್ವರಾಜ್ ಮುಖ್ಯಮಂತ್ರಿಗೆ ದೂರು
ಉಡುಪಿ: ದುಬೈನಿಂದ ಬಂದ ಗರ್ಭಿಣಿ ಮಹಿಳೆಯನ್ನು ಸರ್ಕಾರದ ನಿಯಮಗಳಿಗೆ ವಿರುದ್ಧವಾಗಿ ಹೋಟೆಲ್ ಕ್ವಾರೆಂಟೈನ್ ಮಾಡಲಾಗಿದ್ದು, ಮಾತ್ರವಲ್ಲದೆ ಅವರನ್ನು ಮನೆಗೆ ಕಳುಹಿಸಲಾಗಿಲ್ಲ ಹಾಗೂ ಮನೆಯ ಆಹಾರವನ್ನು ಸಹ ಅವರಿಗೆ ನಿಲ್ಲಿಸಲಾಗಿದೆ. ಆದ್ದರಿಂದ ಗರ್ಭಿಣಿಯನ್ನು ಸರಿಯಾಗಿ ನೋಡಿಕೊಳ್ಳದ ಉಡುಪಿ ಜಿಲ್ಲಾಧಿಕಾರಿಯ ಬೇಜವಾಬ್ದಾರಿತನದ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಟ್ವಿಟ್ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಾಡಿಯೂರಪ್ಪರವರಿಗೆ ದೂರು ನೀಡಿದ್ದಾರೆ.