ಲವ್ ಜಿಹಾದ್ ವಿಷ ಬೀಜ ಬಿತ್ತುವುದೇ ಬಾಲಿವುಡ್ ಸಿನಿಮಾಗಳ ಉದ್ದೇಶ- ಕಾಜಲ್ ಹಿಂದುಸ್ತಾನಿ

ಉಡುಪಿ ಸೆ.3(ಉಡುಪಿ ಟೈಮ್ಸ್ ವರದಿ): ನಮ್ಮ ಯುವತಿಯರಿಗೆ ಸಂಸ್ಕಾರ ನೀಡದಿರುವುದೇ ಲವ್ ಜಿಹಾದ್ ಗೆ ಕಾರಣ ಎಂದು ಗುಜರಾತನ ಸಾಮಾಜಿಕ ಕಾರ್ಯಕರ್ತೆ ಕಾಜಲ್ ಹಿಂದುಸ್ತಾನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ರವಿವಾರ ಉಡುಪಿಯ ರಾಜಾಂಗಣದ ಪಾರ್ಕಿಂಗ್ ಬಳಿಯ ಖಾಸಗಿ ಸ್ಥಳದಲ್ಲಿ ಹಿಂದು ಜಾಗರಣ ವೇದಿಕೆ ಆಯೋಜಿಸಿದ್ದ ದುರ್ಗಾದೌಡ್ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರತಿ ಮನೆಯಲ್ಲೂ ದುರ್ಗೆಯರು ತಯಾರಾಗಲಿ. ನಮ್ಮ ಯುವತಿಯರು ಲವ್ ಜಿಹಾದಿಗೆ ಹೇಗೆ ಬಲಿಯಾಗುತ್ತಾರೆ. ಜೀನ್ಸ್ ಧರಿಸುವ ನಮ್ಮ ಯುವತಿಯರು ಬುರ್ಖಾ ಧರಿಸಲು ಹೇಗೆ ಮಾರುಹೋಗುತ್ತಾರೆ. ಮನೆಯಲ್ಲಿ ಗೋವುಗಳಿಗೆ ಗೋಗ್ರಾಸ ಕೊಟ್ಟ ಹುಡುಗಿಯರು ಗೋಮಾಂಸ ಹೇಗೆ ತಿನ್ನುತ್ತಾರೆ. ಮೂವರು ಸವತಿಯರ ಜೊತೆ ಸಂಸಾರ ನಡೆಸಲು ಯಾಕೆ ಮುಂದಾಗುತ್ತಾರೆ ಎಂದು ಪ್ರಶ್ನಿಸಿದರು.

ಚಲನಚಿತ್ರಗಳಿಂದ ಲವ್ ಜಿಹಾದ್ ಮೂಲಕ ವಿಷ ಬೀಜ ಬಿತ್ತುವುದೇ ಬಾಲಿವುಡ್ ಸಿನಿಮಾಗಳ ಉದ್ದೇಶ ಆದ್ದರಿಂದ ದಕ್ಷಿಣ ಭಾರತೀಯರು ಬಾಲಿವುಡ್ ಸಿನಿಮಾಗಳನ್ನು ಬಹಿಷ್ಕರಿಸಿ ಎಂದು ಕರೆ ನೀಡಿದ ಅವರು, ಬಾಲಿವುಡ್ ನ ಕೊಳಕು ಸಿನಿಮಾಗಳನ್ನು ದಕ್ಷಿಣ ಭಾರತೀಯರು ನೋಡಲೇಬೇಡಿ. ದಕ್ಷಿಣ ಭಾರತೀಯರು ಕರಣ್ ಜೋಹರ್ನನ್ನು ಬಹಿಷ್ಕಾರ ಮಾಡಿ.

ಉತ್ತರ ಭಾರತೀಯರು ಬಾಲಿವುಡ್ ಸಿನಿಮಾ ಬಹಿಷ್ಕರಿಸುತ್ತಿದ್ದಾರೆ, ಆದರೆ ನಿಮಗೆ ದಕ್ಷಿಣ ಭಾರತೀಯರಿಗೆ ಏನಾಗಿದೆ..? ಬಾಲಿವುಡ್ ಸಿನಿಮಾ ಮತ್ತು ಧಾರವಾಹಿಗಳ ಮೂಲಕ ಹಿಂದೂ ಮಹಿಳೆಯರಿಗೆ ಅವಮಾನ ಮಾಡಲಾಗುತ್ತಿದೆ. ಪ್ರೀತಿ, ಅಕ್ರಮ ಮದುವೆ ಮಾಡಿಕೊಳ್ಳುವವರೆಂದು ಹಿಂದೂ ಮಹಿಳೆಯರನ್ನು ಬಿಂಬಿಸಲಾಗುತ್ತಿದೆ. ಆದರೆ ನಿಜ ಜೀವನದಲ್ಲಿ ಹಿಂದೂ ಮಹಿಳೆಯರು ಎಂದೂ ಹೀಗೆ ಮಾಡುವುದಿಲ್ಲ ಎಂದು ಹೇಳಿದರು.

ಗುಜರಾತ್ ನಲ್ಲಿ ಗರ್ಭಾ ನೃತ್ಯ ನಡೆಯುವ ಸ್ಥಳದಲ್ಲಿ ಮುಸ್ಲಿಂ ಯುವಕರು ಬರುತ್ತಾರೆ. ತಮ್ಮ ಮಹಿಳೆಯರನ್ನು ಮಸೀದಿ ಒಳಗೆ ಬಿಡದವರು ನವರಾತ್ರಿಯ ವೇಳೆ ಹಿಂದೂ ಹುಡುಗಿಯರ ಜೊತೆ ಗರ್ಭಾ ನೃತ್ಯ ಮಾಡುತ್ತಾರೆ. ಮುಸ್ಲಿಂ ಹುಡುಗರಿಗೆ ಗರ್ಭಾ ನೃತ್ಯ ನಡೆಯುವ ಸ್ಥಳದಲ್ಲಿ ಏನು ಕೆಲಸ…? ಬೇಕಿದ್ದರೆ ತಮ್ಮ ಮಡದಿಯರನ್ನು ಕರೆತಂದು ಗರ್ಭಾ ನೃತ್ಯ ಮಾಡಲಿ ಎಂದರು.

ಪಿಎಫ್ ಐ ಅಂದರೆ ಪಾಪ್ಯುಲರ್ ಫ್ರಂಟ್ ಅಲ್ಲ ಪಾಯಿಸನ್ ಫಾರ್ ಇಂಡಿಯಾ ಎಂದ ಅವರು, ಲವ್ ಜಿಹಾದ್ ಮತ್ತು ನಮ್ಮ ಧಾರ್ಮಿಕ ಕೇಂದ್ರಗಳ ವಶಪಡಿಸಿಕೊಳ್ಳುವುದು ಮುಸಲ್ಮಾನರ ಕಾರ್ಯತಂತ್ರ. ರಾಷ್ಟ್ರದಲ್ಲಿ ಹಿಂದುಗಳು ಅಪಾಯದಲ್ಲಿದ್ದಾರೆ ಹಿಂದುಗಳು ಮೂರು ಮಹತ್ವದ ನಿರ್ಧಾರ ಕೈಗೊಳ್ಳಬೇಕು. ಎಲ್ಲರೂ ಹಿಂದೂ ಸಂಸ್ಕಾರ ಪಾಲಿಸಬೇಕು, ಹಿಂದುಗಳಿಂದಲೇ ಖರೀದಿಸಬೇಕು, ಹಿಂದೂಗಳಿಗೆ ಮಾತ್ರ ನೌಕರಿ ನೀಡಬೇಕು, ನಿಮ್ಮದೇ ಹಣದಲ್ಲಿ ದೇಶದೊಳಗೆ ಜಿಹಾದಿಗಳ ಸೃಷ್ಡಿಯಾಗಲು ಬಿಡಬೇಡಿ. ಇನ್ನು ಮುಂದೆ ದೇಶದಲ್ಲಿ ಹಿಂದೂ ಕಾರ್ಯಕರ್ತರು ಕೊಲೆಯಾಗಬಾರದು. ಪಿ.ಎಫ್.ಐ ಮೂಲಕ ದೇಶ ಒಡೆಯುವ ಕೆಲಸ ಮುಸಲ್ಮಾನರು ಮಾಡುತ್ತಾ ಬಂದಿದ್ದರು. ಇದೀಗ ಮೋದಿಯವರು ಸರಿಯಾದ ಪಾಠ ಕಲಿಸಿದ್ದಾರೆ ಎಂದು ಹೇಳಿದರು.

ಹಿಂದುಗಳು ಜಾತಿಯ ವಿಚಾರ ಇಟ್ಟುಕೊಂಡು ಹಂಚಿ ಹೋಗಿದ್ದೇವೆ. ಕರ್ನಾಟಕದಲ್ಲಿ ಲಿಂಗಾಯಿತ ವಿವಾದ ಎಬ್ಬಿಸಿ ಹಿಂದೂಗಳಲ್ಲಿ ಬಿಕ್ಕಟ್ಟು ಸೃಷ್ಟಿಸಿದವರು ಗುಜರಾತಿನಲ್ಲೂ ಜಾತಿಯನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಿದರು.

ನಿಮ್ಮ ನಾಡಿನಲ್ಲಿ ಟಿಪ್ಪುವನ್ನು ಏನಂತ ಕರೀತೀರಿ ಗೊತ್ತಿಲ್ಲ ಆದರೆ ಆದರೆ ಗುಜರಾತಿನಲ್ಲಿ ಹಂದಿಗಳಿಗೆ ಟಿಪ್ಪು ,ಔರಂಗಜೇಬ್, ಬಾಬರ್ ಹೆಸರಿಡುತ್ತೇವೆ. ಟಿಪ್ಪು ಮಾನಸಿಕತೆ ಈಗಲೂ ಪಿಎಫ್ ಐ ಮೂಲಕ ಜೀವಂತ ಇತ್ತು. ವಕ್ಫ್ ಬೋರ್ಡ್ ನಲ್ಲೂ ಟಿಪ್ಪೂ ಮಾನಸಿಕತೆಯ ಮತ್ತೊಂದು ಪ್ರತೀಕ ಓವೈಸಿ ಸಹೋದರರ ಮೂಲಕ ಟಿಪ್ಪು ಮಾನಸಿಕತೆ ಜೀವಂತ ಇರಿಸಲಾಗಿದೆ. ನಮ್ಮ ದೇವಾಲಯಗಳ ಭೂಮಿಯ ಅಕ್ರಮ ವಶ ಮಾಡಿಕೊಳ್ಳುವುದರಲ್ಲಿ ವಕ್ಫ್ ಬೋರ್ಡ್ ನಿರತವಾಗಿದೆ. ಜಿಹಾದಿ ವೈರಸ್ ಎದುರಿಸಲು ಹಿಂದೂಗಳೆಲ್ಲರೂ ಒಗ್ಗಟ್ಟಾಗಬೇಕು ಎಂದು ಸಲಹೆ ನೀಡಿದರು.
Pfi ದೇಶ ಓಡೆಯುವ ಕೆಲಸ ಮಾಡಿದರೆ ನೀವು ಮಾಡುತಿರುವುದೇನು ? ಅಂದ ಭಕ್ತರ ಹೊರತು ಎಲ್ಲರಿಗೂ ತಿಳಿದ ವಿಷಯ