ಮಲ್ಪೆ ಬೀಚ್ ನಲ್ಲಿ ನೀರುಪಾಲಾಗುತ್ತಿದ್ದ ಮೂವರು ಪ್ರವಾಸಿಗರ ರಕ್ಷಣೆ
ಮಲ್ಪೆ ಅ.2(ಉಡುಪಿ ಟೈಮ್ಸ್ ವರದಿ): ಮಲ್ಪೆ ಬೀಚ್ ನಲ್ಲಿ ನೀರುಪಾಲಾಗುತ್ತಿದ್ದ ಮೂವರು ಪ್ರವಾಸಿಗರನ್ನು ಜೀವ ರಕ್ಷಕ ಸಿಬ್ಬಂದಿ ಗಳು ರಕ್ಷಿಸಿದ್ದಾರೆ.
ಉತ್ತರ ಬೆಂಗಳೂರಿನ ನಾಗಸಂದ್ರದ ಪ್ರದೀಪ್ (30), ನಾಗೇಶ ವೆಂಕಟೇಶ(30), ರಮೇಶ್ (43) ರಕ್ಷಿಸಲ್ಪಟ್ಟ ಪ್ರವಾಸಿಗರು.
ಇಂದು ಬೆಳಿಗ್ಗೆ 9 ಗಂಟೆ ವೇಳೆ ಕಡಲ ತೀರದಲ್ಲಿ ನೀರಿನಲ್ಲಿ ಮುಳುಗುತ್ತಿದ್ದ ಪ್ರದೀಪ್ ರನ್ನು ರಕ್ಷಿಸಲಾಗಿದ್ದು ಇವರಿಗೆ ಕುಡಿದ ಮತ್ತಿನಲ್ಲಿ ಪ್ರಜ್ಞೆ ಯೇ ಇರಲಿಲ್ಲ ಎಂದು ಹೇಳಲಾಗಿದೆ.
ಬಳಿಕ ಮಧ್ಯಾಹ್ನ 1 ಗಂಟೆ ವೇಳೆ ಕಡಲ ತೀರದಲ್ಲಿ ಈಜುತ್ತಿದ್ದ ವೇಳೆ ನೀರಿನಲ್ಲಿ ಮುಳುಗುತ್ತಿದ್ದ ನಾಗೇಶ ವೆಂಕಟೇಶ ಮತ್ತು ರಮೇಶ್ ಎಂಬವರನ್ನು ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ.