ದುರ್ಗಾ ದೌಡ್’ನಲ್ಲಿ ತಲವಾರು ಪ್ರದರ್ಶನ- ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ: ಶ್ಯಾಮರಾಜ್ ಬಿರ್ತಿ
ಉಡುಪಿ: ಇಂದು ನಡೆದ ದುರ್ಗಾ ದೌಡ್ ಕಾರ್ಯಕ್ರಮದಲ್ಲಿ ಖಡ್ಗ ತಲವಾರು ಜಳಪಿಸಿ ಉಡುಪಿಯಲ್ಲಿ ಭಯದ ವಾತಾವರಣ ಸ್ರಷ್ಟಿಸಲು ಕಾರಾಣರಾದ ಗೂಂಡಾಗಳ ಮೇಲೆ ಈ ಕೂಡಲೇ ಕೇಸು ದಾಖಲಿಸಬೇಕು.
ಸೌಹಾರ್ದ ಬದುಕಿಗೆ, ಬಹುತ್ವಕ್ಕೆ ಹೆಸರುವಾಸಿಯಾದ ಉಡುಪಿಯನ್ನು ಉತ್ತರ ಪ್ರದೇಶದ ಗೂಂಡಾ ರಾಜ್ಯ ಮಾಡಲು ಹೊರಟಿರುವ ಕೋಮುವಾದಿಗಳ ನಡೆಯನ್ನು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ ತೀವ್ರವಾಗಿ ಖಂಡಿಸಿದರು.
ಉಡುಪಿಯನ್ನು ಮಂಗಳೂರು ಮಾಡಲು ಹೊರಟಿರುವ ಧರ್ಮಾಂಧ ಶಕ್ತಿಗಳ ನಡೆಯು ಯಾವ ಕಾರಣಕ್ಕೂ ಸಹಿಸಲಸಾಧ್ಯಾ….
ಉಡುಪಿಯ ಎಲ್ಲಾ ಜಾತ್ಯಾತೀತ ವಾದಿಗಳು ಈ ಘಟನೆಯ ವಿರುಧ್ಧ ಸಂಘಟಿತ ಹೋರಾಟ ನಡೆಸಬೇಕು. ಕರ್ನಾಟಕ ಗ್ರಹ ಸಚಿವರಾದ ಆರಗ ಜ್ಞಾನೇಂದ್ರರವರು ಈ ಕೂಡಲೇ ಉಡುಪಿ ಪೋಲೀಸ್ ವರಿಷ್ಠಾಧಿಕಾರಿಯವರಿಗೆ ಈ ಕಿಡಿಗೇಡಿ ಆರೋಪಿಗಳನ್ನು ಬಂಧಿಸಲು ಸೂಚನೆ ನೀಡಬೇಕೆಂದು ಈ ಮೂಲಕ ಆಗ್ರಹಿಸುತ್ತೇನೆ.