ಶಿಕ್ಷಣ ವ್ಯಾಪಾರವಲ್ಲ, ವ್ಯಕ್ತಿತ್ವ ನಿರ್ಮಾಣವೇ ಗುರಿ: ಸಚಿವ ಸುನಿಲ್
ಉಡುಪಿ: ಶಿಕ್ಷಣ ವ್ಯಾಪಾರವಾಗದೆ, ಪ್ರತಿಯೊಬ್ಬರ ವ್ಯಕ್ತಿತ್ವ ನಿರ್ಮಾಣದ ಗುರಿಯಾಗಬೇಕು ಎಂದು ರಾಜ್ಯ ಇಂಧನ, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.
ಅವರು ಬೆಂಗಳೂರಿನ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ ವತಿಯಿಂದ ಉಡುಪಿ ಜಿಲ್ಲೆಯ 350 ಸರಕಾರಿ, ಅನುದಾನಿತ ಶಾಲೆಗಳ 31,679 ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣಾ ಸಮಾರಂಭವನ್ನು ಅಂಬಾಗಿಲಿನ ಅಮೃತ್ ಗಾರ್ಡನ್‍ನಲ್ಲಿ ಇಂದು ಉದ್ಘಾಟಿಸಿ ಮಾತನಾಡಿದರು.
ವ್ಯಕ್ತಿತ್ವ ನಿರ್ಮಾಣ, ರಾಷ್ಟ್ರೀಯತೆಯ ಪಠ್ಯಕ್ಕೆ ಕೇಸರೀಕರಣದ ವಿರೋಧ ವ್ಯಕ್ತಪಡಿಸಿಲಾಯಿತು. ಮಕ್ಕಳು ಬೇಳೆಯುತ್ತಾ ಸಮಾಜಕ್ಕೆ ಪೂರಕ ಕೆಲಸ ಮಾಡಬೇಕು. ಪಠ್ಯದಲ್ಲಿರದ ಮೌಲ್ಯ ಮನೆ, ಸಮಾಜದಿಂದ ಸಿಗಬೇಕು. ಮನೆ, ಶಾಲೆ, ನೆಲದ ಗುಣ, ಪ್ರೀತಿ ಮರೆಯದೆ ಭಾವನೆಗಳಿಂದ ದೂರವಾಗ ಬಾರದು. ನವ ಭಾರತ ನಿರ್ಮಾಣದ ಪ್ರಧಾನಿ ಕನಸು ನನಸಾಗಬೇಕು.
ಈ ನಿಟ್ಟಿನಲ್ಲಿ ರಾಜ್ಯಕ್ಕೆ ಮಾದರಿ ಕಾರ್ಯಕ್ರಮ ರೂಪಿಸಿದ ಎಚ್. ಎಸ್. ಶೆಟ್ಟರಂತಹ ಉದಾರ ದಾನಿಗಳಿಂದ ಸಮಾಜದಲ್ಲಿ ಬದಲಾವಣೆ, ಪ್ರಗತಿ ಸಾಧ್ಯ ಎಂದರು. ಪಾಂಡಿಚೇರಿ ವಿವಿ ಸ್ಕೂಲ್ ಆಫ್ ಲೈಫ್ ಸೈನ್ಸ್ ಇದರ ಪ್ರಾಧ್ಯಾಪಕ ಮತ್ತು ಡೀನ್ ಪೆÇ್ರ. ಹಾಲಾಡಿ ಪ್ರತಾಪ್ ಕುಮಾರ್ ಶೆಟ್ಟಿ ಮಾತನಾಡಿ, ನಾನು ಏನನ್ನಾದರೂ ಕಲೀತೇನೆ, ನಾನ್ಯಾರಿಗೂ ಕಡಿಮೆಯಿಲ್ಲ ಎನ್ನುವ ಆತ್ಮವಿಶ್ವಾಸ ಪ್ರತಿಯೊಬ್ಬರಲ್ಲಿರ ಬೇಕು. ಸಮಾಜ, ಪರಿಸರದ ಬಗ್ಗೆ ಮಕ್ಕಳು ಕಳಕಳಿ, ಆತ್ಮಗೌರವ, ಆತ್ಮಸ್ಥೈರ್ಯ ಹೊಂದಬೇಕು. ವಿದ್ಯೆ, ತಾಯ್ನಾಡಿನ ಬಗ್ಗೆ ಎಚ್.ಎಸ್.ಶೆಟ್ಟಿ ಹೊಂದಿದ ಗೌರವ ಅನ್ಯರಿಗೂ ಪ್ರೇರಣೆ ಎಂದರು. ಎಚ್.ಎಸ್.ಶೆಟ್ಟಿ ಅವರನ್ನು ಅನುದಾನಿತ ಶಾಲೆಗಳು, ವಿದ್ಯಾರ್ಥಿಗಳು, ಶಿಕ್ಷಕರ ಪರವಾಗಿ ಸನ್ಮಾನಿಸಲಾಯಿತು.
ಉಡುಪಿ ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ಅನುದಾನಿತ ಶಾಲೆಗಳ ನಿರ್ಲಕ್ಷ್ಯ ಸಲ್ಲದು. ಸರಕಾರಿ, ಅನುದಾನಿತ ಶಾಲೆಗಳ ನಡುವೆ ಸೌಲಭ್ಯದ ತಾರತಮ್ಯವಿದ್ದು ಎಚ್.ಎಸ್.ಶೆಟ್ಟಿ ಅನುದಾನಿತ ಶಾಲೆಗಳಿಗೆ ಸಮವಸ್ತ್ರ, ಶೂ ಸಹಿತ ಸೌಲಭ್ಯವನ್ನು ಮುಂದುವರಿಸುವಂತೆ ಮನವಿ ಮಾಡಿದರು.
ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ ಉಪಾಧ್ಯಕ್ಷ ಹೆಚ್. ನಾಗರಾಜ ಶೆಟ್ಟಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್. ಕೆ. ಶಿವರಾಜ್, ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಜಿ.ಪಂ. ಸಿಇಒ ಪ್ರಸನ್ನ ಎಚ್. ಉಪಸ್ಥಿತರಿದ್ದರು.
ಪತ್ರಕರ್ತ ಕೆ.ಸಿ.ರಾಜೇಶ್, ಆರೂರು ತಿಮ್ಮಪ್ಪ ಶೆಟ್ಟಿ ನಿರೂಪಿಸಿದರು. ಡಾ. ಆದರ್ಶ ಹೆಗ್ಡೆ ವಂದಿಸಿದರು. ಈ ಸಂದರ್ಭ ಅತಿಥಿಗಳು ಗಾಂೀಜಿ, ಶಾಸ್ತ್ರೀಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ದಶಾವತಾರದಿಂದ ಬದುಕಿನ ಉದ್ಧಾರ: ನಟ ರಮೇಶ್ ಅರವಿಂದ್: ನಟ, ನಿರ್ಮಾಪಕ ಮಾತ್ರವಲ್ಲ 20ವರ್ಷಕ್ಕಿಂತ ಕೆಳಗಿನವರ ಕೈ ನೋಡಿ ಭವಿಷ್ಯ ಹೇಳುತ್ತೇನೆಂದ ನಟ ರಮೇಶ್ ಅರವಿಂದ್ ನಿಮಗೆ ಉಜ್ವಲ ಭವಿಷ್ಯವಿದೆ. ನಿಮ್ಮ ಬದುಕಿನ ರೂವಾರಿ ನೀವೇ ಹೊರತು ಅನ್ಯರಲ್ಲ, ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲೇ ಇದೆ. ಜೀವನ, ಕುಟುಂಬ, ವೃತ್ತಿ ಬದುಕಿನ ಜವಾಬ್ದಾರಿ ಯಶಸ್ವಿಯಾಗಿ ನಿರ್ವಹಿಸಲು ದಶಾವತಾರದ ಸೂತ್ರ ಮುಂದಿಟ್ಟರು. ರೂಪದರ್ಶಿ ಕೃಷ್ಣ 25ವರ್ಷದ ಬಳಿಕ ಸಮಾಜದಿಂದಾಗಿ ಕಂಸನಾದ ಕತೆ ಹೇಳಿದರು.
ನೀವೆಲ್ಲರೂ ಕೃಷ್ಣರಾಗಬೇಕು, ಕಂಸರಾಗದಿರಿ. ಒಳ್ಳೇತನ ಉಳಿಸಿಕೊಳ್ಳಿ, ಕಂಸನೂ ಯಾಕೆ ಕೃಷ್ಣನಾಗಬಾರದು? ಜೀವನದ ಸೌಂದರ್ಯ ಮುಖ್ಯ. ನೀರೊಳಗಿನ ಮೀನಂತೆ ನಿಮ್ಮ ಆಯ್ಕೆಯ ವೃತ್ತಿ, ಕ್ಷೇತ್ರ, ಬದುಕು ನಡೆಸಿ. ನೀರಿನಿಂದ ಹೊರಗೆ ಬಿದ್ದ ಮೀನಂತೆ ಒದ್ದಾಡಬೇಡಿ. ಸಾಧನೆ ಮಾಡಿ ಮಣ್ಣಿಗೆ(ಊರಿಗೆ) ಬನ್ನಿ, ಕೊರಗಬೇಡಿ. ಕೀಳರಿಮೆ ಬೇಡ. ವ್ಯಕ್ತಿತ್ವ, ಅಂತಃಸ್ಸತ, ನಡವಳಿಕೆ ಮುಖ್ಯ. ಮನಃಸಾಕ್ಷಿಗೆ ವಿರುದ್ಧವಾಗಿ ಕೆಲಸ ಮಾಡಬೇಡಿ. ರಾಮನ ಆದರ್ಶ ವ್ಯಕ್ತಿತ್ವ(ನಿಯಮ ಮುರಿಯಬೇಡಿ) ಅಳವಡಿಸಿ ಧರ್ಮದ ಹಾದಿಯಲ್ಲಿ ಸಾಗಿ. ಕೋಪ ಬೇಡ, ಸ್ವಯಂ ವಿಷ ಸೇವಿಸಿಕೊಂಡಂತೆ. ನಾಡಿದ್ದಿನ ಬದಲು ಇಂದು, ನಾಳೆಯ ಕೆಲಸವನ್ನು ಪರ್ಫೆಕ್ಟಾಗಿ ಮಾಡುವ ಅಭ್ಯಾಸವೇ ಜೀವನದ ಯಶಸ್ಸನ್ನು ನಿರ್ಧರಿಸುತ್ತದೆ ಎಂದರು.
ಮಕ್ಕಳ ಶಿಕ್ಷಣ ಮೇಲಿನ ಹೂಡಿಕೆಯಲ್ಲಿದೆ ಭವಿಷ್ಯ: ಎಚ್. ಎಸ್. ಶೆಟ್ಟಿ
ಹಣ ಹಾಕಿ, ಹಣ ತೆಗೆವ ವ್ಯಾಪಾರದ ಹೊರತಾಗಿಯೂ ಮಕ್ಕಳ ಶಿಕ್ಷಣ, ಆರೋಗ್ಯದ ಮೇಲೆ ಮಾಡುವ ಹೂಡಿಕೆಯೇ ಭವಿಷ್ಯದ ಆಧಾರ ಎಂದು ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ(ಬೆಂಗಳೂರು) ಇದರ ಅಧ್ಯಕ್ಷ ಎಚ್. ಎಸ್. ಶೆಟ್ಟಿ ಹೇಳಿದ್ದಾರೆ.
ಜನಪರ ಕೆಲಸಕ್ಕೆ ಸಂಪಾದನೆಯ ಒಂದು ಭಾಗ ವಿನಿಯೋಗಿಸುತ್ತಿದ್ದು ಬಾಲ್ಯದ ಶಾಲಾ ದಿನಗಳಲ್ಲಿ ಒಲಿ ಕೊಡೆ ಹಿಡಿದು ಶಾಲೆಗೆ ತೆರಳುವ, ಕಷ್ಟದಿಂದ ಶಿಕ್ಷಣ ಪಡೆದ ಭಾವನಾತ್ಮಕ ವಿಷಯವನ್ನು ಎಚ್. ಎಸ್. ಶೆಟ್ಟಿ ಮಕ್ಕಳೊಂದಿಗೆ ಹಂಚಿಕೊಂಡರು.ಸಮವಸ್ತ್ರ ಸಂಹಿತೆಯ ನಗರವಾದ ಉಡುಪಿಯಲ್ಲಿ ಸಮಭಾವದ ಕಲ್ಪನೆಗೆ ಸಮವಸ್ತ್ರ ವಿತರಿಸಲಾಗುತ್ತಿದೆ ಎಂದರು.
ಮಂತ್ರ ಹೇಳುತ್ತಾ, ಗಂಟೆಯಾಡಿಸುವ ಶಿಕ್ಷಕರೊಡ್ಡಿದ ಸವಾಲಿನಲ್ಲಿ ಸೋತರೂ ಏಕಕಾಲದಲ್ಲಿ ಬಹುಕೆಲಸ ಮಾಡುವ ಪಾಠ ಕಲಿತೆ. ಕಾಮನ್ ಸೆನ್ಸ್(ಸಾಮಾನ್ಯ ಜ್ಞಾನ) ಅತಿ ಮುಖ್ಯವಾಗಿದ್ದು ಅಪ್ಪ ನೆಟ್ಟದ ಆಲದ ಮರಕ್ಕೆ ನೇಣು ಹಾಕಿಕೊಳ್ಳಬೇಡಿ(ಮಗನಿಗೆ ಆಕ್ಸಿಜನ್ ಸಿಗಲೆಂದು ಮರ ನೆಟ್ಟಿದ್ದು ಗೊತ್ತಿರದೆ) ಸ್ವಯಂ ರಕ್ಷಣೆ, ದೇಶದ ಭದ್ರತೆ, ಸಮಾಜದ ಭವಿಷ್ಯದ ನಿಟ್ಟಿನಲ್ಲಿ ಸಾಮಥ್ರ್ಯ ಅರಿತು ಗುರಿ ಸಾಧನೆ ಮಾಡಬೇಕು. ಹೊಸ ಭಾರತದ ಉದಯದ ಹಾದಿಯಲ್ಲಿ ಇಂದಿನ ಮಕ್ಕಳು ಮುಂದೆ ಕೊಡುಗೆ ನೀಡಬೇಕು. ಪರಿಸರ ಹಾಳಾಗದಂತೆ ಎಚ್ಚರ ವಹಿಸಿ, ಕೃಷಿಯಲ್ಲೂ ತೊಡಗಿಕೊಳ್ಳಿ. ಅಪ್ಪನ, ಅಮ್ಮ, ಅನ್ನಕ್ಕೆ ಪರ್ಯಾಯವಿಲ್ಲ ಎಂದರು.