ಎಸ್ಡಿಪಿಐ ಕಚೇರಿ ಸೀಲ್ ಆಗಿದ್ದರೆ ಮಾಹಿತಿ ನೀಡಿ- ಎಡಿಜಿಪಿ ಅಲೋಕ್

ಬೆಂಗಳೂರು ಸೆ.30: ಎಲ್ಲಿಯಾದರು ಎಸ್.ಡಿ.ಪಿ.ಐ ಕಚೇರಿಗಳು ಸೀಲ್ ಆಗಿದ್ದರೆ ಅಂತಹ ಸ್ಥಳಗಳ ಬಗ್ಗೆ ನನಗೆ ಮಾಹಿತಿ ನೀಡಿ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅವರು ಹೇಳಿದ್ದಾರೆ.

ಪಿ.ಎಫ್.ಐ ಕಚೇರಿಗಳ ಜೊತೆಗೆ ಎಸ್ಡಿಪಿಐ ಕಚೇರಿಗಳಿಗೂ ಬೀಗಮುದ್ರೆ ಹಾಕಲಾಗಿದೆ ಎಂಬ ಆರೋಪಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ ಅವರು, ನಿಷೇಧಿತ ಸಂಘಟನೆ ಪಿ.ಎಫ್.ಐ ಕಚೇರಿಗಳಿಗೆ ಪೊಲೀಸರು ದಾಳಿ ನಡೆಸಿ, ಹಲವು ಕಚೇರಿಗಳನ್ನು ಸೀಲ್ ಮಾಡಿದ್ದಾರೆ. ಆದರೆ ಪೊಲೀಸರು ಎಸ್‍ಡಿಪಿಐ ಕಚೇರಿಗಳನ್ನು ಸೀಲ್ ಮಾಡಿಲ್ಲ. ಪಿ.ಎಫ್.ಐ ಬಳಕೆ ಮಾಡುತ್ತಿದ್ದ ಎಸ್‍ಡಿಪಿಐ ಕಚೇರಿಗಳಲ್ಲಿ ಶೋಧ ನಡೆಸಲಾಗಿದೆ’. ಒಂದು ವೇಳೆ ಎಸ್‍ಡಿಪಿಐ ಕಚೇರಿಗಳು ಸೀಲ್ ಆಗಿದ್ದರೆ, ಅಂತಹ ಸ್ಥಳಗಳ ಬಗ್ಗೆ ನನಗೆ ಮಾಹಿತಿ ನೀಡಿ’ ಎಂದು ಸ್ಪಷ್ಟಪಡಿಸಿದ್ದಾರೆ. 

Leave a Reply

Your email address will not be published. Required fields are marked *

error: Content is protected !!