40% ಕಮಿಷನ್ ಸರ್ಕಾರದಲ್ಲಿ ನಿರ್ಮಾಣ ಹಂತದ ಗಂಗೊಳ್ಳಿ ಬಂದರು ಮುಳುಗಿದೆ- ಸಿದ್ದರಾಮಯ್ಯ
ಬೆಂಗಳೂರು, ಸೆ.29: “ರಾಜ್ಯದ 40 ಪರ್ಸೆಂಟ್ ಕಮಿಷನ್ ಸರ್ಕಾರ ಕುಂದಾಪುರ ತಾಲೂಕಿನ ಗಂಗೊಳ್ಳಿ ಬಂದರಿನಲ್ಲಿ ಮುಳುಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ರಾಜ್ಯದ 40 ಪರ್ಸೆಂಟ್ ಕಮಿಷನ್ ಸರ್ಕಾರ ಕುಂದಾಪುರ ತಾಲೂಕಿನ ಗಂಗೊಳ್ಳಿ ಬಂದರಿನಲ್ಲಿ ಮುಳುಗಿದೆ. 12 ಕೋಟಿ ರುಪಾಯಿ ವೆಚ್ಚದ ಜಟ್ಟಿ ನಿರ್ಮಾಣ ಹಂತದಲ್ಲೇ ನದಿ ನೀರಿನಪಾಲಾಗಿದೆ. ಈ ಕಾಮಗಾರಿಯಲ್ಲಿ ಗುತ್ತಿಗೆದಾರ ರಾಜ್ಯ ಬಿಜೆಪಿಗೆ ನೀಡಿದ್ದ ಕಮಿಷನ್ ಎಷ್ಟು…? ಎನ್ನುವ ಬಗ್ಗೆ ತನಿಖೆಯಾಗಲಿ” ಎಂದು ಆಗ್ರಹಿಸಿದ್ದಾರೆ.
ಇನ್ನು ಕುಂದಾಪುರ ತಾಲೂಕಿನ ಗಂಗೊಳ್ಳಿಯ ಮೀನುಗಾರಿಕಾ ಬಂದರು ಪ್ರದೇಶದಲ್ಲಿ ಸುಮಾರು 150 ಮೀಟರಿಗೂ ಅಧಿಕ ಉದ್ದದ ಜೆಟ್ಟಿ ಬುಧವಾರ ಸಂಜೆ ಕುಸಿದಿದ್ದು, ಅವೈಜ್ಞಾನಿಕವಾಗಿ ನಡೆಯುತ್ತಿರುವ ಕಾಮಗಾರಿಯಿಂದಾಗಿ ಇದು ಕುಸಿದಿದೆ ಎಂದು ಸ್ಥಳೀಯ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.