ಹಿರಿಯಡ್ಕ: ಬಸ್-ಬೈಕ್ ಮುಖಾಮುಖಿ ಡಿಕ್ಕಿ- ಸವಾರ ಸ್ಥಳದಲ್ಲೇ ಮೃತ್ಯು
ಹಿರಿಯಡ್ಕ ಸೆ.29 (ಉಡುಪಿ ಟೈಮ್ಸ್ ವರದಿ): ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಹಿರಿಯಡಕ ಬೊಮ್ಮರಬೆಟ್ಟು ಗ್ರಾಮದ ಗುಡ್ಡೆಯಂಗಡಿ ಎಂಬಲ್ಲಿ ನಿನ್ನೆ ರಾತ್ರಿ ನಡೆದಿದೆ.
ಗುಡ್ಡೆಯಂಗಡಿ ನೆಡ್ಲು ಬೈಲುವಿನ ಮನೋಹರ ಜೋಗಿ (33) ಮೃತಪಟ್ಟವರು.
ಗುಡ್ಡೆಯಂಗಡಿ ಬಸ್ಸು ನಿಲ್ದಾಣದ ಸಮೀಪದ ಪಿಶ್ ಮಾರ್ಕೇಟ್ ಬಳಿ ಕಾರ್ಕಳ ಕಡೆಯಿಂದ ವೇಗವಾಗಿ ಬಂದ ಬಸ್ ಮನೋಹರ್ ಜೋಗಿ ಅವರ ಬೈಕ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಅಪಘಾತದಲ್ಲಿ ಗಂಭೀರ ಗಾಯಗೊಂಡ ಮನೋಹರ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದಿಂದ ಮನೋಹರ್ ಅವರ ಬೈಕ್ ಸಂಪೂರ್ಣ ಜಖಂಗೊಂಡಿದ್ದು ಬಸ್ಸಿನ ಎದುರು ಬಾಗ ಜಖಂಗೊಂಡಿರುತ್ತದೆ.