ಸರ್ಕಾರಿ ನೌಕರರ ಒಕ್ಕೂಟ ಸೆ.29 ರ ಮುಷ್ಕರ ಉಡುಪಿ ಜಿಲ್ಲೆಯ ನೌಕರರು ಭಾಗವಹಿಸುತ್ತಿಲ್ಲ- ಕೆ.ದಿನಕರ ಶೆಟ್ಟಿ
ಉಡುಪಿ ಸೆ.28 (ಉಡುಪಿ ಟೈಮ್ಸ್ ವರದಿ): ಸರ್ಕಾರಿ ನೌಕರರ ಒಕ್ಕೂಟದ ಹೆಸರಿನಲ್ಲಿ ಸೆ.29 ರಂದು ಕರೆಕೊಟ್ಟಿರುವ ಮುಷ್ಕರದಲ್ಲಿ ಜಿಲ್ಲೆಯ ಯಾವುದೇ ನೌಕರರು ಭಾಗವಹಿಸುತ್ತಿಲ್ಲ ಎಂದು ಹೇಳುವ ಮೂಲಕ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಉಡುಪಿ ಜಿಲ್ಲಾ ಶಾಖೆಯು ಮುಷ್ಕರಕ್ಕೆ ತಮ್ಮ ಬೆಂಬಲ ಇಲ್ಲ ಎಂದು ಸೂಚಿಸಿದೆ.
ಈ ಬಗ್ಗೆ ಪ್ರಕಟಣೆ ಮೂಲಕ ಮಾಹಿತಿ ನೀಡಿದ ಸಂಘದ ಜಿಲ್ಲಾಧ್ಯಕ್ಷ ಕೆ.ದಿನಕರ ಶೆಟ್ಟಿ ಅಂಪಾರು ಹಾಗೂ ಜಿಲ್ಲಾ ಕಾರ್ಯದರ್ಶಿ ಎಚ್ ಉದಯ್ ಕುಮಾರ್ ಶೆಟ್ಟಿ ಅವರು, ಸರಕಾರಿ ನೌಕರರ ಒಕ್ಕೂಟ ಬೆಂಗಳೂರು ಇವರು ವೇತನ ಆಯೋಗ ರಚನೆ ಮತ್ತು ಎನ್.ಪಿ.ಎಸ್ ರದ್ದತಿ ಬಗ್ಗೆ ಸರ್ಕಾರದ ಗಮನ ಸೆಳೆಯಲು. ಬೇರೆ ಬೇರೆ ವೃಂದ ಸಂಘಗಳ ಹೆಸರನ್ನು ಬಳಸಿಕೊಂಡು ಸೆ.29 ರಂದು ಮುಷ್ಕರಕ್ಕೆ ಕರೆಕೊಟ್ಟಿದ್ದಾರೆ. ಆದರೆ ಮುಖ್ಯಮಂತ್ರಿಗಳು ಈಗಾಗಲೇ ವೇತನ ಆಯೋಗ ರಚಿಸಲು ಸ್ಪಷ್ಟ ಬರವಸೆಯನ್ನು ನೀಡಿದ್ದರು ಸಹ ನೌಕರರಲ್ಲಿ ಗೊಂದಲ ಮೂಡಿಸಿತ್ತಿರುವುದು ವಿಪರ್ಯಾಸವಾಗಿದೆ ಎಂದಿದ್ದಾರೆ.
ಹಾಗೂ ಉಡುಪಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿತ್ತಿರುವ ಎನ್.ಪಿ.ಎಸ್ ನೌಕರರು ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬಾಂದವ್ಯ ಹಾಗೂ ಸಮನ್ವಯದಿಂದ ಕೂಡಿದ್ದು ಈ ಹಿಂದಿನಂತೆ ಮುಂದೆಯು ಕೂಡ ಎನ್.ಪಿ.ಎಸ್ ನೌಕರರ ಸಮಸ್ಯೆ ಆದಾಗ ಜೊತೆಯಾಗಿ ಹೋರಾಟ ಮಾಡಿ ಅವರಿಗೆ ನ್ಯಾಯ ಒದಗಿಸಿಲಾಗುವುದೆಂದು ತಿಳಿಸಲಾಗಿದೆ. ಆದ್ದರಿಂದ ಸೆ.29 ರಂದು ಸರ್ಕಾರಿ ನೌಕರರ ಒಕ್ಕೂಟದ ಹೆಸರಿನಲ್ಲಿ ಕರೆಕೊಟ್ಟ ಮುಷ್ಕರದಲ್ಲಿ ಜಿಲ್ಲೆಯ ಯಾವುದೇ ನೌಕರರು ಭಾಗವಹಿಸುತ್ತಿಲ್ಲ ಎಂದು ತಿಳಿಸಿದ್ದಾರೆ.