ಹೆಬ್ರಿ: ಅಪರಾಧ ಕೃತ್ಯಕ್ಕೆ ಹೊಂಚು ಹಾಕುತ್ತಿದ್ದ ಯುವಕ ವಶಕ್ಕೆ
ಹೆಬ್ರಿ ಸೆ.28 (ಉಡುಪಿ ಟೈಮ್ಸ್ ವರದಿ): ಬೇಳಂಜೆ ಬಸ್ಸು ನಿಲ್ದಾಣ ಬಳಿ ಯಾವುದೋ ಅಪರಾಧ ಕೃತ್ಯ ನಡೆಸಲು ಹೊಂಚು ಹಾಕುತ್ತಿದ್ದ ಆರೋಪದ ಮೇಲೆ ಯುವಕನೋರ್ವನನ್ನು ಹೆಬ್ರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕಾರವಾರದ ಮುಂಡುಗೋಡುವಿನ ಮಣಿಕಂಠ (24) ಪೊಲೀಸರು ವಶಕ್ಕೆ ಪಡೆದಾತ. ಸೆ.28 ರಂದು ನಸುಕಿನ ವೇಳೆ ಹೆಬ್ರಿ ಠಾಣಾ ಎ.ಎಸ್.ಐ ರಾಮ ಪ್ರಭು ಮತ್ತು ರಾಜ್ ಕುಮಾರ್ ರವರು ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಬೇಳಂಜೆ ಬಸ್ಸು ನಿಲ್ದಾಣ ಬಳಿ ಇದ್ದ ಮಣಿಕಂಠ ಎಂಬಾತ ಪೊಲೀಸರನ್ನು ಕಂಡು ತನ್ನ ಇರುವಿಕೆಯನ್ನು ಮರೆಮಾಚಲು ಯತ್ನಿಸುತ್ತಿದ್ದ. ಈ ವೇಳೆ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆತನು ಯಾವುದೇ ಸಮರ್ಪಕವಾದ ಉತ್ತರ ನೀಡದೇ ಇದ್ದ ಕಾರಣ ಯುವಕನು ಯಾವುದೋ ಅಪರಾಧ ಕೃತ್ಯ ನಡೆಸಲು ಹೊಂಚು ಹಾಕಿತ್ತಿದ್ದ ಅನುಮಾನದ ಮೇರೆಗೆ ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.