ಪಿಎಫ್ಐ ಸಂಘಟನೆಯಲ್ಲಿದ್ದವರನ್ನು ಮುಸ್ಲಿಂ ಸಮಾಜ ಬಹಿಷ್ಕರಿಸಬೇಕು- ರಘುಪತಿ ಭಟ್
ಉಡುಪಿ ಸೆ.28: ಪಿಎಫ್ಐ ಸಂಘಟನೆಯಲ್ಲಿದ್ದವರನ್ನು, ಸಂಘಟನೆಯನ್ನು ಮುಸ್ಲಿಂ ಸಮಾಜ ಬಹಿಷ್ಕರಿಸಬೇಕು ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಉಡುಪಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ದೇಶ ವಿರೋಧಿ ಕೃತ್ಯದಲ್ಲಿ ತೊಡಗಿದ ಸಂಘಟನೆಗಳನ್ನು ಸರಕಾರ ನಿಷೇಧಿಸಿದ್ದು, ಸ್ವಾಗತಾರ್ಹ ಬೆಳವಣಿಗೆ. ಮುಸಲ್ಮಾನರಲ್ಲಿ ಬಹುಸಂಖ್ಯಾತರು ಸಜ್ಜನರಿದ್ದು, ಕೆಲವೇ ಜನ ಪಿಎಫ್ಐ ಮತ್ತು ಸಿಎಫ್ಐ ಯಂತಹ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ಈ ಸಂಘಟನೆಯನ್ನು ಮುಸ್ಲಿಂ ಸಮಾಜ ಬಹಿಷ್ಕರಿಸಬೇಕು ಎಂದು ತಿಳಿಸಿದ್ದಾರೆ.
ಹಾಗೂ ನಾನು ಹಿಜಾಬ್ ಗಲಾಟೆ ಸಂದರ್ಭದಲ್ಲೇ ಹೇಳಿದ್ದೆ. ಎಲ್ಲಾ ಮುಸಲ್ಮಾನರೂ ಪಿಎಫ್ಐಯನ್ನು ಒಪ್ಪುವುದಿಲ್ಲ ಅಂತ. ಸಂಘಟನೆಯ ಕೆಲವರು ಮುಸ್ಲಿಂ ಹೆಣ್ಣುಮಕ್ಕಳನ್ನು ಪ್ರಚೋದಿಸಿ ಗಲಾಟೆ ಮಾಡಿಸಿದರು. ಈಗ ನಾವು ಹೇಳಿದ್ದು ಸಾಬೀತಾಗಿದೆ. ಮುಸಲ್ಮಾನ ಸಮಾಜ ಎಚ್ಚೆತ್ತುಕೊಳ್ಳಬೇಕು ಎಂದು ಸಲಹೆ ನೀಡಿದರು.