ಸಮಾಜ ದ್ರೋಹಿ ಸಂಘಟನೆ ಮರು ಹುಟ್ಟದಂತೆ ಮುನ್ನೆಚ್ಚರಿಕೆ ವಹಿಸಿ- ಪೇಜಾವರಶ್ರೀ
ಉಡುಪಿ ಸೆ.28(ಉಡುಪಿ ಟೈಮ್ಸ್ ವರದಿ): ಸಮಾಜ ದ್ರೋಹಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಹಲವು ಸಂಘಟನೆಗಳನ್ನು ನಿಷೇಧ ಮಾಡಿರುವುದು ಮುಂದೆ ಯಾರೂ ಇಂತಹ ವಿದ್ವಂಸಕ ಕೃತ್ಯಗಳಲ್ಲಿ ತೊಡಗಿಕೊಳ್ಳದಂತೆ ಒಂದು ಪಾಠವಾಗಬೇಕು ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಸಮಾಜ ದ್ರೋಹಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಹಲವು ಸಂಘಟನೆಗಳನ್ನು ನಿಷೇಧ ಮಾಡಿರುವುದು ಕೇಳಿ ನೆಮ್ಮದಿಯಾಯಿತು. ಇದೊಂದು ಪಾಠ ಆಗಬೇಕು.
ಸಮಾಜದಲ್ಲಿ ಮುಂದೆ ಯಾರೂ ಕೂಡಾ ವಿದ್ವಂಸಕ ಕೃತ್ಯ, ಸಮಾಜ ವಿರೋಧಿ ಚಟುವಟಿಕೆಗಳನ್ನು ಮಾಡಬಾರದು. ಸರಕಾರವೂ ಕೂಡಾ ಕಾಲ ಕಾಲಕ್ಕೆ ಈ ಬಗ್ಗೆ ಜಾಗೃತಿ ವಹಿಸಿ ಇಂತಹ ಶಕ್ತಿಗಳು ಮರು ಹುಟ್ಟು ಪಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.
ಹಾಗೂ ಸಾಮಾಜ ಅಥವಾ ಯಾವುದೇ ಪಕ್ಷಗಳು ಇಂತಹ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡದೆ ಅದನ್ನು ಆರಂಭದಲ್ಲಿ ನಿಯಂತ್ರಿಸಿ ಕೊನೆಗೊಳಿಸುವ ಕೆಲಸ ಮಾಡಿದರೆ ಸಮಾಜದಲ್ಲಿ ಶಾಂತಿ ನೆಮ್ಮದಿಯ ಬದುಕು ಬಾಳುವಂತಾಗತ್ತೆ. ಈ ದಿಸೆಯಲ್ಲಿ ಎಲ್ಲರೂ ಕೂಡಾ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.