ಪಿಎಫ್​ಐ ಸಹಿತ ವಿವಿಧ ಸಂಘಟನೆ ನಿಷೇಧ- ರಾಜ್ಯದಲ್ಲಿ ಕಟ್ಟೆಚ್ಚರಕ್ಕೆ ಡಿಜಿ ಸೂಚನೆ

ಬೆಂಗಳೂರು ಸೆ.28 : ಪಿಎಫ್​ಐ ಮತ್ತು ಅದರ ಸಹವರ್ತಿ ಸಂಘಟನೆಗಳನ್ನು ಕಾನೂನು ಬಾಹಿರ ಎಂದು ಘೋಷಿಸಿ ಭಾರತ ಸರ್ಕಾರವು ಐದು ವರ್ಷಗಳ ಅವಧಿಗೆ ನಿಷೇಧಿಸಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸುವಂತೆ ಪೊಲೀಸ್ ಇಲಾಖೆಯ ಮುಖ್ಯಸ್ಥರಾದ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಈ ವಿಚಾರವಾಗಿ ಮಾಹಿತಿ ನೀಡಿರುವ ಅವರು, ಈ ಬಗ್ಗೆ ಶೀಘ್ರದಲ್ಲಿಯೇ  ರಾಜ್ಯ ಸರ್ಕಾರದ ಆದೇಶವೂ ಬರುತ್ತದೆ. ಮುಸ್ಲಿಂ ಸಮುದಾಯದ ನಾಯಕರನ್ನು ಸಂಪರ್ಕಿಸಿ, ಸಭೆಗೆ ಕರೆದು. ಶಾಂತಿ ಕಾಪಾಡುವಂತೆ ಸಂದೇಶ ನೀಡಲು ಕೋರಿ. ಹಾಗೂ ಅವರು ಹೇಳಿಕೆ ನೀಡುವಾಗ ಎಚ್ಚರ ವಹಿಸುವಂತೆ ಸೂಚಿಸಿ. ಈ ವೇಳೆ ಅಹಿತಕರ ಘಟನೆಗಳನ್ನು ನಡೆಸಲು ಯತ್ನಿಸಿದರೆ ಅಂತರವನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಿ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಶಾಂತಿ ಕದಡುವ ಕೆಲಸ ಅಗಬಾರದು ಎಂದು ಹೇಳಿದರು.

ಇದರೊಂದಿಗೆ ಗಸ್ತು ಹೆಚ್ಚಿಸುವುದೂ ಸೇರಿದಂತೆ ಹಲವು ಮುಂಜಾಗ್ರತಾ ಕ್ರಮಕ್ಕಾಗಿ ಕೇಂದ್ರ ಸರ್ಕಾರದಿಂದ ಆದೇಶ ಬಂದಿದೆ ಎಂದೂ ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!