ಮಂಗಳೂರು/ಉಡುಪಿಯ ಹಲವು ಪಿಎಫ್ಐ ಮುಖಂಡರ ವಶಕ್ಕೆ

ಮಂಗಳೂರು, ಸೆ 27 : ನಗರ ಹಾಗೂ ಗ್ರಾಮಾಂತರ ಪ್ರದೇಶದ ಪಾಪ್ಯುಲರ್ ಫ್ರಂಟ್ ಆಫ್‌ ಇಂಡಿಯಾ ಸಂಘಟನೆಯ ಹಲವು ಮಂದಿ ನಾಯಕರನ್ನು ಪೊಲೀಸರು ಕಳೆದ ತಡರಾತ್ರಿ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಉಳ್ಳಾಲ, ತಲಪಾಡಿ, ಸಹಿತ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಕೆಲವು ಪ್ರದೇಶದ ಮನೆಗಳಿಂದ ಹಲವು ಮಂದಿ ಪಿಎಫ್‌ಐ ಮುಖಂಡರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ಹಲವು ಮಂದಿಯನ್ನು ಸೆಕ್ಷನ್ 107, 157 ಕಾಯ್ದೆಯಡಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಉಡುಪಿ ಜಿಲ್ಲೆಯ ವಿವಿಧೆಡೆ ಪೋಲಿಸ್ ದಾಳಿ: ನಾಲ್ವರು ಪಿಎಫ್‌ಐ ಮುಖಂಡರು ವಶಕ್ಕೆ

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಹೂಡೆ ಮುಖಂಡ ಇಲ್ಯಾಸ್ ಹೂಡೆ, ಆಶಿಕ್ ಕೋಟೇಶ‍್ವರ, ರಜಾಬ್ ಗಂಗೊಳ್ಳಿ ಮತ್ತು ಖಲೀಲ್ ಸೈಯ್ಯದ್ ರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!