ಕನ್ನರ್ಪಾಡಿ ಶ್ರೀಜಯದುರ್ಗಾ ಪರಮೇಶ್ವರಿ ದೇವಸ್ಥಾನ: ನವರಾತ್ರಿ ಮಹೋತ್ಸವ ಪ್ರಾರಂಭ
ಉಡುಪಿ ಸೆ.26 (ಉಡುಪಿ ಟೈಮ್ಸ್ ವರದಿ): ಇತಿಹಾಸ ಪ್ರಸಿದ್ಧ ಉಡುಪಿಯ ಕನ್ನರ್ಪಾಡಿಯ ಶ್ರೀ ಜಯದುರ್ಗಾ ಪರಮೇಶ್ವರಿ ದೇವಸ್ಥಾನದ ನವರಾತ್ರಿ ಮಹೋತ್ಸವವು ಸೆ.26 ರಿಂದ ಅ.4 ರ ವರೆಗೆ ನಡೆಯಲಿದೆ.
ವೇ.ಮೂ ಪುತ್ತೂರು ಶ್ರೀಶ ತಂತ್ರಿ ಯವರ ನೇತೃತ್ವದಲ್ಲಿ ಧಾರ್ಮಿಕ ಪೂಜಾ ವಿಧಿವಿಧಾನಗಳು ನಡೆಯಲಿದ್ದು, ಇಂದು ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಆರಂಭಗೊಂಡಿದ್ದು, ಬೆಳಿಗ್ಗೆ ಕದಿರು ಕಟ್ಟುವುದು ಹಾಗೂ ಮಧ್ಯಾಹ್ನ ಚಂಡಿಕಾಯಾಗ ಮಹಾಪೂಜೆ ನಡೆಯಿತು.
ರಾತ್ರಿ 8 ಗಂಟೆಯಿಂದ ಕಲ್ಪೋಕ್ತ ಪೂಜೆ , ರಾತ್ರಿ ಪೂಜೆ, ಚಂದ್ರ ಮಂಡಲ ರಥೋತ್ಸವ, ಪಲ್ಲಕ್ಕಿ ಸೇವೆ, ರಂಗ ಪೂಜೆ ನಡೆಯಲಿದೆ. ಇನ್ನು ಸೆ.27 ರಿಂದ ಅ.4 ರ ವರೆಗೆ ಪ್ರತಿ ದಿನ ಮಧ್ಯಾಹ್ನ ಚಂಡಿಕಾಯಾಗ ಮಹಾಪೂಜೆ ನಡೆಯಿತು. ಹಾಗೂ ರಾತ್ರಿ 8 ಗಂಟೆಯಿಂದ ಕಲ್ಪೋಕ್ತ ಪೂಜೆ , ರಾತ್ರಿ ಪೂಜೆ, ಚಂದ್ರ ಮಂಡಲ ರಥೋತ್ಸವ, ಪಲ್ಲಕ್ಕಿ ಸೇವೆ, ರಂಗ ಪೂಜೆ ನಡೆಯಲಿದೆ.
ಅ.2 ರಂದು ಶಾರದಾ ಪೂಜೆ ಆರಂಭಗೊಳ್ಳಲಿದ್ದು, ಸೆ.5 ರ ವಿಜಯ ದಶಮಿಯಂದು ಶಾರದಾ ವಿಸರ್ಜನೆ ಮೂಲಕ ನವರಾತ್ರಿ ಮಹೋತ್ಸವ ಸಂಪನ್ನಗೊಳ್ಳಲಿದೆ.