ಮಂಗಳೂರು : ನಗರದ ಪ್ರಖ್ಯಾತ ಆಸ್ಪತ್ರೆಯ ಡೀನ್ ನಾಪತ್ತೆ 

ಮಂಗಳೂರು (ಉಡುಪಿ ಟೈಮ್ಸ್ ವರದಿ): ನಗರದ ಪ್ರಖ್ಯಾತ ಆಸ್ಪತ್ರೆಯ ಡೀನ್ ಆಗಿ ಸೇವೆ ಸಲ್ಲಿಸುತ್ತಿದ್ದ ಪ್ರೊ. ಡಾ. ಉರ್ಬನ್ ಡಿಸೋಜ ಸೆ. 25ರ ರಾತ್ರಿಯಿಂದ ಕಾಣೆಯಾಗಿರುವ ಸುದ್ದಿ ವರದಿಯಾಗಿದೆ.

ಪತ್ನಿ ಬಳಿ ಅಂಗಡಿಗೆ ಹೋಗಿ ಬರುತ್ತೇನೆಂದು ತನ್ನ ದ್ವಿಚಕ್ರ ವಾಹನದಲ್ಲಿ ತೆರಳಿರುವ ಡಾ. ಉರ್ಬನ್ ಡಿಸೋಜ ತಡ ರಾತ್ತಿಯಾದರೂ ಮನೆಗೂ ಬಾರದೆ ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮತ್ತೊಂದೆಡೆ ಅವರ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದ್ದು ಗೊಂದಲಕ್ಕಿಡು ಮಾಡಿದೆ.

ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು, ಅವರ ಮೊಬೈಲ್ ಲೋಕೇಶನ್ ಕೊನೆಯಲ್ಲಿ ಉಳ್ಳಾಲ ಬೀಚ್ ಬಳಿ ಇದ್ದ ಮಾಹಿತಿ ಪೊಲೀಸರು ಕಲೆಹಾಕಿದ್ದಾರೆ ಇನ್ನಷ್ಟೇ ಮಾಹಿತಿ ತಿಳಿದು ಬರಬೇಕಾಗಿದೆ.

2 thoughts on “ಮಂಗಳೂರು : ನಗರದ ಪ್ರಖ್ಯಾತ ಆಸ್ಪತ್ರೆಯ ಡೀನ್ ನಾಪತ್ತೆ 

Leave a Reply

Your email address will not be published. Required fields are marked *

error: Content is protected !!