ಮಲ್ಪೆ:ಅಂಗಡಿಯ ಬೀಗ ಮುರಿದು ಲಕ್ಷ ಮೌಲ್ಯದ ಮೊಬೈಲ್ ಕಳವು- ಸಿಸಿಟಿವಿಯಲ್ಲಿ ಸೆರೆ

ಮಲ್ಪೆ: ಮೊಬೈಲ್ ಅಂಗಡಿಯ ಬಾಗಿಲು‌ ಮುರಿದು ಒಳಪ್ರವೇಶಿಸಿದ ಕಳ್ಳನೋರ್ವ ಲಕ್ಷ ರೂ. ಮೌಲ್ಯದ ಮೊಬೈಲ್ ಹಾಗೂ ಹತ್ತು ಸಾವಿರ ನಗದು ಕಳವು ಮಾಡಿಕೊಂಡು ಪರಾರಿಯಾದ ಘಟನೆ ಮಲ್ಪೆಯಲ್ಲಿ ನಡೆದಿದೆ.

ಕಳ್ಳನು ಕಳ್ಳತನ ಮಾಡುವ ದೃಶ್ಯ ಅಂಗಡಿಯಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬೆಲೆಬಾಳುವ 7 ಮೊಬೈಲ್ ಗಳನ್ನು ಕಳ್ಳತನ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಕಳ್ಳನು ಮುಖ ಚಹರೆ ಮರೆಮಾಚಲು ರೈನ್ ಕೋಟ್ ಧರಿಸಿದ್ದನು ಎನ್ನಲಾಗಿದೆ. ಮಲ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!