ಕುಂದಾಪುರ: ಗ್ಯಾಸ್ಟಿಕ್ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿ ಮೃತ್ಯು

ಕುಂದಾಪುರ: ಗ್ಯಾಸ್ಟಿಕ್ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕುಂದಾಪುರ ಬಂಟ್ವಾಡಿ ಗ್ರಾಮದಲ್ಲಿ ನಡೆದಿದೆ. ಬಂಟ್ವಾಡಿ ಗ್ರಾಮದ ನಿವಾಸಿ 49ವರ್ಷದ ಸೀತಾರಾಮ ಮೃತ ದುರ್ದೈವಿ. ಇವರು‌ ಕುಂದಾಪುರದ ಸೆಂಚುರಿ ನಾನ್ ವೆಜ್ ಹೋಟೆಲ್ ನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದರು. ಗ್ಯಾಸ್ಟಿಕ್ ಸಮಸ್ಯೆಯಿಂದ ಬಳಲುತ್ತಿದ್ದು ಔಷಧಿ ತೆಗೆದುಕೊಳ್ಳುತ್ತಿದ್ದರು. ಇವರಿಗೆ ಸೆ.23ರಂದು ಮಧ್ಯಾಹ್ನ ವೇಳೆಗೆ ಹೋಟೆಲ್ ನಲ್ಲಿ ಜೋರಾಗಿ ದಮ್ಮು ಬಂದಿದ್ದು, ಹೋಟೆಲ್ ಮಾಲೀಕರು ಕೂಡಲೇ  ಕುಂದಾಪುರ ಮಂಜುನಾಥ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಪರೀಕ್ಷಿಸಿದ ವೈದ್ಯರು ಸೀತಾರಾಮ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   

Leave a Reply

Your email address will not be published. Required fields are marked *

error: Content is protected !!