ಉಡುಪಿ: ಸಾವಿನಲ್ಲೂ ಸಾರ್ಥಕತೆ ಮೆರೆದ ನಿವೃತ್ತ ಮಿಲಿಟರಿ ಟೈಲರ್ ಕೆ.ವೇದವ್ಯಾಸ ಭಟ್

ಉಡುಪಿ: ಕರಂಬಳ್ಳಿ ವೆಂಕಟರಮಣ ಲೇ ಔಟ್ ನಿವಾಸಿ ಮೂಲತಃ ಕಟಪಾಡಿಯವರಾದ ನಿವೃತ್ತ ಮಿಲಿಟರಿ ಟೈಲರ್ ಕೆ.ವೇದವ್ಯಾಸ ಭಟ್(81)ಸೆ.23 ರಂದು ನಿಧನ ಹೊಂದಿದರು.

ಮೃತರು ಪತ್ನಿ ಹಾಗೂ ಪುತ್ರಿಯನ್ನು ಹಾಗೂ ಬಂಧು ಬಳಗದವರನ್ನು ಅಗಲಿದ್ದಾರೆ. ಇವರು ಚೆನ್ನೈಯ ಆವಾಡಿ ಎಂಬಲ್ಲಿ ಕೇಂದ್ರ ಸರಕಾರದ ಅರ್ಬನ್ ಕ್ಲೋತಿಂಗ್ ಪ್ಯಾಕ್ಟರಿಯಲ್ಲಿ ಸುಮಾರು 39 ವರ್ಷಗಳ ಕಾಲ ಮಿಲಿಟರಿ ಸೈನಿಕರಿಗೆ ಬಟ್ಟೆಯನ್ನು ಹೊಲಿದು ಕೊಡುತ್ತಿರುವ ಕೆಲಸವನ್ನು ಮಾಡಿಕೊಳ್ಳುತ್ತಿದ್ದರು. ಅಲ್ಲದೆ ಬಿಡುವಿನ ಸಮಯದಲ್ಲಿ ಬಡಜನರಿಗೆ ಉಚಿತವಾಗಿ ಟೈಲರಿಂಗ್ ತರಬೇತಿ ಕೊಡುತ್ತಿದ್ದು ಹಾಗೂ ಬಡ ವಿದ್ಯಾರ್ಥಿ ಯವರಿಗೆ ತನಗೆ ಬಂದ ಸಂಬಳದಲ್ಲಿ ಶಿಕ್ಷಣಕ್ಕಾಗಿ ಸಹಾಯವನ್ನು ನೀಡುತ್ತಿದ್ದರು.

ಹಾಗೂ ತನ್ನ ಸಹಪಾಠಿಗಳು ತಮ್ಮ ದೇಹದಾನವನ್ನು ಮಾಡಿಕೊಂಡಿದ್ದನ್ನು ಕಂಡು ಪ್ರೇರಿತರಾಗಿ ತಾನು ಕೂಡಾ ದೇಹದಾನ ಮಾಡಿಕೊಳ್ಳಬೇಕೆಂಬ ಇಚ್ಚೆಯನ್ನು ಕರಂಬಳ್ಳಿ ನೆರೆಮನೆಯ ನಿವಾಸಿ ನಮೋ ಫ್ರೆಂಡ್ಸ್ ದೊಡ್ಡಣಗುಡ್ಡೆ ಇದರ ಅಧ್ಯಕ್ಷ ವಿನಯ್ ಕುಮಾರ್ ಪೂಜಾರಿಯವರೊಂದಿಗೆ ನಾಲ್ಕು ವರುಷದ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದುದರಿಂದ ದೇಹದಾನದ ಬಗ್ಗೆ ಹೇಳಿಕೊಂಡಿದ್ದರು.

ಆ ಪ್ರಯಕ್ತ ವಿನಯ್ ಕುಮಾರ್ ಪೂಜಾರಿಯವರು ಇವರ ಸಹಿ ಪಡೆದು ಕೊಂಡು ತಾನೇ ಸ್ವತಃ ಮಣಿಪಾಲದ K.M.C.ಆಸ್ಪತ್ರೆಯಲ್ಲಿ ತೆರಳಿ ನೊಂದಾಯಿಸಿಕೊಂಡು ಬಂದಿದ್ದರು ಹಾಗೂ ಇಂತಹ ಅನಾರೋಗ್ಯ ಸಮಯದಲ್ಲಿ ಮನೆಯಲ್ಲಿ ವಯಸ್ಸಾದ ಪತ್ನಿ ಮಾತ್ರ ಇದ್ದುದರಿಂದ ಅವರನ್ನು ಆಸ್ಪತ್ರೆಗೆ ಕರೆದು ಕೊಂಡು ಹೋಗಿ ಬರಲು ಸಹಕರಿಸಿದ್ದರು.

ಸೆ.23 ರಂದು ಮುಂಜಾನೆ 2.30 ಗಂಟೆಗೆ ಸರಿಯಾಗಿ ವೇದವ್ಯಾಸ ಭಟ್ ರವರು ಇಹಲೋಕ ತ್ಯಜಿಸಿದರು. ಪುತ್ರಿ ಬೆಂಗಳೂರಿನಿಂದ ಬಂದ ನಂತರ ಮೃತ ದೇಹವನ್ನು ಪತ್ನಿ ಹಾಗೂ ಪುತ್ರಿಯ ಮುಖಾಂತರ ದಾನವಾಗಿ ಮಣಿಪಾಲದ K.M.C.ಆಸ್ಪತ್ರೆಗೆ ನೀಡಲಾಯಿತು.

Leave a Reply

Your email address will not be published. Required fields are marked *

error: Content is protected !!