ಮಲೆನಾಡು ಉಗ್ರರ ಅಡ್ಡವಾಗಲು ಬಿಡುವುದಿಲ್ಲ- ಆರಗ ಜ್ಞಾನೇಂದ್ರ
ಶಿವಮೊಗ್ಗ ಸೆ.24: ಮಲೆನಾಡು ಉಗ್ರರ ಅಡ್ಡವಾಗಲು ಬಿಡುವುದಿಲ್ಲ ಎಂದು ಶಿವಮೊಗ್ಗದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಶಂಕಿತ ಇಬ್ಬರು ಉಗ್ರರರು ಮೂಲತಃಹ ತೀರ್ಥಹಳ್ಳಿಯವರಾಗಿದ್ದು, ಮಂಗಳೂರಿನಲ್ಲಿ ವಾಸವಾಗಿದ್ದರು. ಮತಾಂಧಶಕ್ತಿಗಳ ಸಂಪರ್ಕ ಪಡೆದು ಈ ರೀತಿ ಮಾಡಿದ್ದಾರೆ ಈ ಬಗ್ಗೆ ಎನ್‍ಐಎ ಅಧಿಕಾರಿಗಳು ಸಹ ತನಿಖೆ ಮಾಡುತ್ತಿದ್ದಾರೆ. ರಾಷ್ಟ್ರದ ಏಕತೆಗೆ ಭಂಗ ತರುವವರ ವಿರುದ್ಧ ಕ್ರಮ ಆಗಲಿದೆ. ಮಲೆನಾಡು ಉಗ್ರರ ಅಡ್ಡವಾಗಲು ಬಿಡುವುದಿಲ್ಲ. ತನಿಖೆ ನಡೆಸಲು ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ನೀಡಿದ್ದೇವೆ ಎಂದರು.
ಹಾಗೂ ತುಂಬಾ ಡೀಪ್ ಆಗಿ, ತನಿಖೆ ಮಾಡಿದ್ದರಿಂದ ಪ್ರಕರಣ ಹೊರಬಂದಿದೆ. ಈ ಬಗ್ಗೆ ತನಿಖೆ ಮುಂದುವರಿದಿದ್ದು, ಯಾರು ಯಾರಿಗೆ ಯಾವ ಯಾವ ಆಯುಧ ಬಳಸಬೇಕೋ, ಯಾರು ಯಾರಿಗೆ ಯಾವ ಭಾಷೆ ಬಳಸಬೇಕೋ ಅದನ್ನ ಬಳಸಬೇಕಾಗುತ್ತದೆ. ಈ ಹಿಂದೆ ಯುಎಪಿಎ ಕೇಸ್ ಹಾಕಿದಾಗ ಅನವಶ್ಯಕವಾಗಿ ಹಾಕ್ತಿದ್ದಾರೆ ಅಂದ್ರು. ಈಗ ಏನಾಯ್ತು, ಇಂತಹ ಪ್ರಕರಣ ಬೆಳಕಿಗೆ ಬಂತು. ಇವರ ಮುಖ ನೋಡಿದರೆ, ಹಿನ್ನೆಲೆ ನೋಡಿದರೆ ಏನು ಅಲ್ಲ ಅನ್ಸುತ್ತೆ. ಆದರೆ ಮತಾಂಧತೆಗೆ ಒಳಗಾದಾಗ ಇಂತಹ ಕೃತ್ಯ ನಡೆಯುತ್ತದೆ. ಅಮೂಲಾಗ್ರವಾದ ಪರಿಶೀಲನೆ ನಡೆಯುತ್ತಿದೆ ಪೊಲೀಸರಿಗೆ ಎಲ್ಲಾ ರೀತಿಯ ಜಾಡು ಸಿಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿ ಶಿವಮೊಗ್ಗ ಪೊಲೀಸರಿಗೆ ಅಭಿನಂದನೆ ಸಲ್ಲಿಸುವ ಜೊತೆಗೆ ರಿವಾರ್ಡ್ ಘೋಷಣೆ ಮಾಡ್ತೇನೆ ಎಂದು ಹೇಳಿದರು.