ಕೇಂದ್ರದಿಂದ ಅನ್ ಲಾಕ್ 4.0: ಸೆ.30ರವರೆಗೂ ಶಾಲಾ-ಕಾಲೇಜು ತೆರೆಯುವಂತಿಲ್ಲ: ಏನಿರುತ್ತೆ? ಏನಿರಲ್ಲ?

ನವದೆಹಲಿ: ಕೊರೋನಾ ಮಹಾಮಾರಿ ನಡುವೆಯೂ ಹಂತ ಹಂತವಾಗಿ ಸಹಜಸ್ಥಿತಿಗೆ ತರಲು ಕೇಂದ್ರ ಸರ್ಕಾರ ಅನ್ ಲಾಕ್ ಪ್ರಕ್ರಿಯೆಯನ್ನು ನಡೆಸಿಕೊಂಡು ಬರುತ್ತಿದೆ. ಅದೇ ರೀತಿ ಇದೀಗ ಸೆ.7ರಿಂದ ಮೆಟ್ರೋ ಸೇವೆಗೆ ಅನುಮತಿ ನೀಡಿದೆ. 

ಸೆಪ್ಟೆಂಬರ್ 1ರಿಂದ ಅನ್ ಲಾಕ್ 4.0 ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಕಂಟೈನ್ಮೆಂಟ್ ಝೋನ್ ಗಳಲ್ಲಿ ಮಾತ್ರ ಲಾಕ್ ಡೌನ್ ಗೆ ಅವಕಾಶ ನೀಡಲಾಗಿದ್ದು, ರಾಜ್ಯಗಳು ಇನ್ನು ಮುಂದೆ ಲಾಕ್ ಡೌನ್ ಮಾಡುವಂತಿಲ್ಲ.

ಏನಿರಲ್ಲ!
* ಸಿನಿಮಾಮಂದಿರ, ಮಲ್ಟಿಪ್ಲೆಕ್ಸ್, ಸ್ವಿಮ್ಮಿಂಗ್ ಪೂಲ್ ತೆರೆಯುವಂತಿಲ್ಲ.
* ಸೆ.30ರವರೆಗೂ ಶಾಲಾ-ಕಾಲೇಜು ತೆರೆಯುವಂತಿಲ್ಲ.
* ಅಂತಾರಾಷ್ಟ್ರೀಯ ವಿಮಾನ ಸಂಚಾರಕ್ಕೆ ಅವಕಾಶವಿಲ್ಲ.
* ಮನರಂಜನಾ ಪಾರ್ಕ್ ತೆರೆಯುವಂತಿಲ್ಲ.

ಏನಿರುತ್ತೆ!
* ಆನ್ ಲೈನ್ ಶಿಕ್ಷಣ ಮುಂದೂವರಿಕೆ.
* ಅಂತಾರಾಜ್ಯ ಸಂಚಾರಕ್ಕೆ ನಿರ್ಬಂಧ ಇಲ್ಲ.
* ಬಯಲುರಂಗಮಂದಿರಕ್ಕೆ ಅವಕಾಶ ನೀಡಲಾಗಿದೆ. 
* ಸಭೆ, ಸಮಾರಂಭಗಳಿಗೆ 100 ಜನ ಸೇರಲು ಅವಕಾಶ. 
* ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
* ರಿಸರ್ಚ್ಸ್ ಗಳಿಗೆ ಅವಕಾಶ.

Leave a Reply

Your email address will not be published. Required fields are marked *

error: Content is protected !!