ಉಡುಪಿ: ಅಪಾರ್ಟ್ ಮೆಂಟ್’ನಿಂದ ಬಿದ್ದು ಬಾಲಕ ಮೃತ್ಯು

ಮಲ್ಪೆ ಸೆ.23 (ಉಡುಪಿ ಟೈಮ್ಸ್ ವರದಿ): ಅಪಾರ್ಟ್ ಮೆಂಟ್ ನಲ್ಲಿದ್ದ ಜೇನು ತೆಗೆಯುವುದನ್ನು ನೋಡುತ್ತಿದ್ದ ಬಾಲಕನೋರ್ವ ಮಹಡಿ ಮೇಲಿನಿಂದ ಬಿದ್ದು ಮೃತಪಟ್ಟ ಘಟನೆ ಕನ್ನರಪಾಡಿಯಲ್ಲಿ ನಡೆದಿದೆ.

ಆಂದ್ರ ಪ್ರದೇಶ ಮೂಲದ ಪ್ರಸ್ತುತ ಉದ್ಯಾವರದಲ್ಲಿ ನೆಲೆಸಿರುವ ರೀನಾ ಮಂಡೆಲ್ ಎಂಬವರ ಮಗ ಆಶಿಕ್ (13) ಮೃತಪಟ್ಟ ಬಾಲಕ.

ಜೇನು ತೆಗಿಯುವ ಕೆಲಸ ಮಾಡಿಕೊಂಡಿರುವ ರೀನಾ ಮಂಡೆಲ್ ಅವರು 3 ದಿನದ ಹಿಂದೆ ಉಡುಪಿಗೆ ಬಂದು ತಮ್ಮ ಸಂಬಂಧಿಕರೊಂದಿಗೆ ಉದ್ಯಾವರ ಚರ್ಚ್ ಹಿಂದುಗಡೆ ಟೆಂಟ್ ಹಾಕಿಕೊಂಡು  ವಾಸ ಮಾಡಿಕೊಂಡಿದ್ದರು. ಕನ್ನರಪಾಡಿ ಜಯದುರ್ಗಾ ದೇವಸ್ಥಾನದ ಎದುರು ಇರುವ ಪ್ಲಾಟ್ ವೊಂದರ ಅಪಾಟ್ಮೆರ್ಂಟ್ ನ ಮಹಡಿಯಲ್ಲಿ ಇದ್ದ ಜೇನನ್ನು ಕಂಡು ಅದನ್ನು ತೆಗೆಯಲು ಫ್ಲಾಟ್ ನ ಮಾಲೀಕರ ಬಳಿ ಅನುಮತಿ ಕೇಳಿ ಜೇನು ತೆಗೆಯಲು ನಿನ್ನೆ ಬೆಳಿಗ್ಗೆ ರೀನಾ ಮಂಡೆಲ್ ಅವರ ಮಗಳ ಗಂಡ ಆಕಾಶ ಹಾಗೂ ಅವರ ಅಕ್ಕನ ಮಗಳ ಗಂಡ ರೋಶನ್ ಜೊತೆಗೆ ಆಶಿಕ್ ಅಪಾರ್ಟ್ ಮೆಂಟ್ ಗೆ ತೆರಳಿದ್ದರು.

ಬಳಿಕ ಆಕಾಶ  ಮತ್ತು ರೋಶನ್ ರವರು ಅಪಾಟ್ಮೆರ್ಂಟ್ ಮೇಲೆ ಹೋಗಿ ಜೇನು ತೆಗೆಯುತ್ತಿರುವಾಗ ಮಹಡಿ ಮೇಲಿಂದ ಜೇನು ತೆಗೆಯುತ್ತಿರುವುದನ್ನು ನೋಡುತ್ತಿದ್ದ ಆಶಿಕ್ ಆಯಾತಪ್ಪಿ ಆಕಸ್ಮಿಕವಾಗಿ ಅಪಾಟ್ಮೆರ್ಂಟ್ ನ ಮಹಡಿಯಿಂದ ಕೆಳಗೆ ಇದ್ದು ಗಂಭೀರ ಗಾಯಗೊಂಡಿದ್ದಾನೆ. ತಕ್ಷಣ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂಬುದಾಗಿ ರೀನಾ ಮಂಡೆಲ್ ಅವರು ನೀಡಿದ ಮಾಹಿತಿಯಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Leave a Reply

Your email address will not be published. Required fields are marked *

error: Content is protected !!