ಭಯೋತ್ಪಾದನಾ ಕೃತ್ಯಕ್ಕೆ ಸಂಚು ಆರೋಪ- ಪಿಎಫ್‍ಐ ನ 7 ಮಂದಿ ಮುಖಂಡರ ಬಂಧನ
ಬೆಂಗಳೂರು ಸೆ.23: ರಾಜ್ಯದ ಹಲವು ಕಡೆಗಳಲ್ಲಿ ಎನ್‍ಐಎ ಅಧಿಕಾರಿಗಳು ಪಿಎಫ್‍ಐ ಸಂಘಟನೆಯ ಮುಖಂಡರ ಮನೆ ಹಾಗೂ ಕಚೇರಿಗಳಿಗೆ ನಿನ್ನೆ ಮುಂಜಾನೆ ಏಕಕಾಲಕ್ಕೆ ದಾಳಿ ಮಾಡಿದ್ದು ರಾಜ್ಯದಾದ್ಯಂತ ಭಾರೀ ಸದ್ದು ಮಾಡಿತ್ತು. ಇದೀಗ ಕಾನೂನುಬಾಹಿರ ಚಟುವಟಿಕೆ ಹಾಗೂ ಭಯೋತ್ಪಾದನಾ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ ಆರೋಪದಡಿ ಈ ದಾಳಿ ನಡೆಸಿದ್ದು, ಪಿಎಫ್‍ಐ ಸಂಘಟನೆಯ ಏಳು ಮಂದಿ ಮುಖಂಡರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
2022ರ ಏಪ್ರಿಲ್ 13 ರಂದು ದಾಖಲಾಗಿರುವ ಪ್ರಕರಣದ ವಿಚಾರಣೆ ನಡೆಸುತ್ತಿರುವ ನವದೆಹಲಿಯ ಎನ್‍ಐಎ ವಿಶೇಷ ನ್ಯಾಯಾಲಯ, ಆರೋಪಿಗಳ ಕಚೇರಿ ಹಾಗೂ ಮನೆಗಳಲ್ಲಿ ಶೋಧ ನಡೆಸಲು ಸೆ. 21 ರಂದು ವಾರಂಟ್ ಜಾರಿ ಮಾಡಿತ್ತು. ಅದರನ್ವಯ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು, ಜಾರಿ ನಿರ್ದೇಶನಾಲಯ ಹಾಗೂ ಪೊಲೀಸರ ನೆರವಿನೊಂದಿಗೆ ಬೆಂಗಳೂರು, ಮಂಗಳೂರು, ಕಲಬುರಗಿ, ಮೈಸೂರು ಸೇರಿದಂತೆ 9 ಕಡೆಗಳಲ್ಲಿ ದಾಳಿ ನಡೆಸಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಬೆನ್ಸನ್ ಟೌನ್ ಹಾಗೂ ಪುಲಿಕೇಶಿನಗರದಲ್ಲಿರುವ ಪಿಎಫ್‍ಐ ಕಚೇರಿ, ಅನಿಸ್ ಅಹ್ಮದ್ ಅವರ ಬಾಗಲೂರುವಿನ ಮನೆ, ಅಪ್ಸರ್ ಪಾಷಾ ಅವರ ಟೆಲಿಕಾಂ ಲೇಔಟ್ ಮನೆ, ಅಬ್ದುಲ್ ವಾಹೀದ್ ಸೇಠ್ ಅವರ ಜಯಮಹಲ್ ಮನೆ, ಮೊಹಮ್ಮದ್ ಸಾಕೀಬ್ ಅವರ ರಿಚ್ಮಂಡ್ ಟೌನ್ ಫ್ಲ್ಯಾಟ್, ಯಾಸೀರ್ ಹಸನ್ ಅವರ ಆರ್.ಟಿ.ನಗರ ಭೀಮಣ್ಣ ಲೇಔಟ್ ಮನೆ ಗಳಿಗೆ ದಾಳಿ ನಡೆಸಲಾಗಿತ್ತು. ಹಾಗೂ ಈ ವೇಳೆ ನಗದು, ಹರಿತ ಆಯುಧಗಳು, ಡಿಜಿಟಲ್ ಉಪಕರಣಗಳನ್ನು ಜಪ್ತಿ ಮಾಡಲಾಗಿದೆ ಎನ್ನಲಾಗಿದೆ.
ಹಾಗೂ ಈ ವೇಳೆ ಪಿಎಫ್‍ಐ ಮುಖಂಡರಾದ ಪಿಎಫ್‍ಐ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಯಾಸೀರ್ ಹಸನ್ ಅಲಿಯಾಸ್ ಯಾಸೀರ್ ಅರ್ಫತ್ ಹಸನ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಅನಿಸ್ ಅಹ್ಮದ್, ಮೊಹಮ್ಮದ್ ಸಾಕೀಬ್, ಕಾರ್ಯದರ್ಶಿ ಅಪ್ಸರ್ ಪಾಷಾ, ಉಪಾಧ್ಯಕ್ಷ ಅಬ್ದುಲ್ ವಾಹೀದ್ ಸೇಠ್, ಮೈಸೂರು ಘಟಕದ ಮಾಜಿ ಅಧ್ಯಕ್ಷ ಮೊಹಮ್ಮದ್ ಫಾರೂಕ್ ಉರ್ ರೆಹಮಾನ್, ಕಲಬುರ್ಗಿ ಜಿಲ್ಲಾ ಘಟಕದ ಖಜಾಂಚಿ ಶಾಹಿದ್ ನಾಸಿರ್ ರನ್ನು ಅಧಿಕಾರಿಗಳು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
PFI ಭಾರತದಲ್ಲಿ ಮುಸ್ಲಿಂ ಸಬಲೀಕರಣ ಕೆಲಸ ಮಾಡುತ್ತಿದೆ.. RSS ಗೆ ಯಾವುದೇ ಮುಸಲ್ಮಾನರ ಸಬಲೀಕರಣ ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ .ಭಯೋತ್ಪಾದಕರು ಲೋಕಸಭೆಯಲ್ಲಿ ಆಶ್ರಯ ಪಡೆದಿದ್ದಾರೆ.. ಇತ್ತೀಚೆಗೆ ಆರೆಸ್ಸೆಸ್ ಮಾಜಿ ನಾಯಕ ದೇಶಕ್ಕೆ ಸತ್ಯ ಹೇಳಿದ್ದಾರೆಆರ್ಎಸ್ಎಸ್ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ತಮ್ಮ ಭಯೋತ್ಪಾದಕ ಚಟುವಟಿಕೆಗಳನ್ನು ಮರೆಮಾಡಲು ಪ್ರಯತ್ನಿಸುತ್ತಿದೆ
ಕೋವಿಡ್-19 ಸಮಯದಲ್ಲಿ PFI ಎಲ್ಲಾ ಧಾರ್ಮದವರ ಶವ ಅಂತಿಮ ಸಂಸ್ಕಾರ ಮಾಡಿದೆ ಇದು ಭಯೋತ್ಪಾದನೆಯೇ? ಅಜ್ಮೀರ್ ಸ್ಫೋಟ ಮಾಡಿದವರು ಯಾರು?ಮಕ್ಕಾ ಸ್ಫೋಟಿಸಿದವರು ಯಾರು? ಮಂಗಳೂರು ವಿಮಾನ ನಿಲ್ದಾಣದಲ್ಲಿ ಪೊಲೀಸರಿಗೆ ಬಾಂಬ್ ಸಿಕ್ಕಿದ್ದು ಯಾರ ಕೈಯಲ್ಲಿ?