ಆಚಾರ್ಯಾಸ್ ಏಸ್ ವತಿಯಿಂದ ಪೋಸ್ಟ್ ಮಿಡ್ ಟರ್ಮ ಬ್ಯಾಚ್
ಉಡುಪಿ: ಒಂಬತ್ತು, ಹತ್ತನೇತರಗತಿ, ಪಿಯುಸಿ, ಸಿಇಟಿ, ಜೆಯಿಯಿ, ನೀಟ್, ಬ್ಯಾಂಕಿಂಗ್ ಹಾಗೂ ಇತರೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ಕೃಷ್ಟ ಗುಣಮಟ್ಟದ ತರಬೇತಿ ಆಯೋಜಿಸಿ ಗರಿಷ್ಠ ಫಲಿತಾಂಶ ಗಳಿಸುತ್ತಿರುವ ಉಡುಪಿ ಹಾಗೂ ಬ್ರಹ್ಮಾವರದ ಆಚಾರ್ಯಾಸ್ ಏಸ್ ಸಂಸ್ಥೆಯ ವತಿಯಿಂದ ಪೋಸ್ಟ್ ಮಿಡ್ ಟರ್ಮ್ ಬ್ಯಾಚನ್ನು ಅಕ್ಟೋಬರ್ ಮೊದಲ ವಾರದಿಂದ ಆಯೋಜಿಸಲಾಗುತ್ತಿದೆ.
ಅಕ್ಟೋಬರ್ ಒಂದನೇ ತಾರೀಖಿನಿಂದ ಪ್ರತಿದಿನ ಬೆಳಿಗ್ಗೆ 9.30ರಿಂದ ವಿವಿಧ ತರಗತಿಗಳು ಆರಂಭವಾಗಲಿದೆ.
ಒಂಬತ್ತು ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳಿಗೆ ದಸರಾ ರಜೆ ಮುಗಿಯುವ ವರೆಗೆ ಪ್ರತಿದಿನ ಅಪರಾಹ್ನ 1 ರಿಂದ 4.30 ರ ವರೆಗೆ ವಿಜ್ಞಾನ ವಿಭಾಗದ ಫಿಸಿಕ್ಸ್, ಕೆಮಿಸ್ಟ್ರಿ,ಮಾತ್ಸ್,ಹಾಗೂ ಬಯಾಲಜಿ ಕುರಿತಾಗಿ ಜರಗಲಿದೆ. ಪ್ರಿಪರೇಟರಿ ಹಾಗೂ ವಾರ್ಷಿಕ ಪರೀಕ್ಷೆಯನ್ನು ಗಮನದಲ್ಲಿರಿಸಿ ತರಬೇತಿಗಳನ್ನು ನೀಡಲಾಗುವುದು.ರಜೆ ಮುಗಿದ ನಂತರ ಪ್ರತಿ ಶನಿವಾರ ಸಂಜೆ ಹಾಗೂ ಬಾನುವಾರ ಈ ತರಬೇತಿ ಸಾಗಲಿದೆ. ಅಂತೆಯೇ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೂ ಕೂಡಾ ಇದೇ ಮಾದರಿಯಲ್ಲಿ ಬೆಳಿಗ್ಗೆ 9.30 ರಿಂದ ಅಪರಾಹ್ನ 1ಗಂಟೆಯ ವರೆಗೆ ವಿಜ್ಞಾನ ಹಾಗೂ ಗಣಿತದ ವಿಭಾಗದ ತರಗತಿಗಳನ್ನು ಹಮ್ಮಿಕೊಳ್ಳಲಾಗಿದೆ.ಪ್ರಿಪರೇಟರಿ ಹಾಗೂ ವಾರ್ಷಿಕ ಪರೀಕ್ಷೆಗೆ ಪೂರಕವಾಗಿ ಸಿದ್ಧತೆಗಳು ಜರಗಲಿದೆ. ಜೊತೆಗೆ ಸಿಇಟಿ, ಜೆಯಿಯಿ ಹಾಗೂ ನೀಟ್ ತರಗತಿಗಳನ್ನು ಕೂಡಾ ಆಯೋಜಿಸಲಾಗುವುದು.
ಪರಿಣಿತ ಉಪನ್ಯಾಸಕರು ಈ ತರಬೇತಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ವಿದ್ಯಾರ್ಥಿಗಳ ಹೆಚ್ಚಿನ ಅಧ್ಯಯನಕ್ಕೆ ಸಂಸ್ಥೆಯ ಗ್ರಂಥಾಲಯದಲ್ಲಿನ ವಿವಿಧ ಪ್ರಕಾಶಕರ ಕೃತಿಗಳು ಉಚಿತವಾಗಿ ಲಭ್ಯವಿದೆ.
ಆಸಕ್ತ ವಿದ್ಯಾರ್ಥಿಗಳು ಉಡುಪಿ ವೆಂಕಟ್ರಮಣ ದೇವಾಲಯದ ಸಮೀಪದ ರಾಧೇಶ್ಯಾಂ ಕಟ್ಟಡದಲ್ಲಿರುವ ಆಚಾರ್ಯಾಸ ಏಸ್ ಅಥವಾ ಬ್ರಹ್ಮಾವರ ಎಸ್.ಎಂ.ಎಸ್ ಚರ್ಚ್ ಮುಂಭಾಗದ ಮಧುವನ ಸಂಕೀರ್ಣದಲ್ಲಿರುವ ಆಚಾರ್ಯಾಸ್ ಏಸ್ ನ್ನು ಸಂಪರ್ಕಿಸಿಬೇಕೆಂದು ಸಂಸ್ಥೆಯ ನಿರ್ದೇಶಕ ಅಕ್ಷೋಭ್ಯ ಆಚಾರ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.