ಉಡುಪಿ: ಎನ್ಐಎಯಿಂದ ಬಂಧನ ಭೀತಿ-ಪಿಎಫ್ಐ ಮುಖಂಡನಿಗೆ ಹುಡುಕಾಟ
ಉಡುಪಿ ಸೆ.22: ಎನ್ ಐಎ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಬಂಧನ ಭೀತಿಯಿಂದ ಉಡುಪಿಯಲ್ಲಿ ತಲೆಮರೆಸಿಕೊಂಡಿರುವ ಪಕ್ಕದ ಜಿಲ್ಲೆಯ ಪಿ.ಎಫ್.ಐ ಮುಖಂಡರೊಬ್ಬರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಇಂದು ದೇಶದಾದ್ಯಂತೆ ಎನ್.ಐ.ಎ ಅಧಿಕಾರಿಗಳು ಪಿಎಫ್ ಐ ಮುಖಂಡರ ಮನೆ ಹಾಗೂ ಕಚೇರಿಗಳಿಗೆ ದಾಳಿ ನಡೆಸಿದ್ದು, ಮಂಗಳೂರಿನಲ್ಲೂ ದಾಳಿ ನಡೆದಿದೆ. ಈಗಾಗಲೇ ನಾಲ್ವರು ಪಿಎಫ್ ಐ ಮುಖಂಡರ ಬಂಧನ ಆಗಿದ್ದು, ಪಕ್ಕದ ಜಿಲ್ಲೆಯ ಪಿಎಫ್ ಐ ಮುಖಂಡರೊಬ್ಬರು ಬಂಧನ ಭೀತಿಯಿಂದ ಹೆದರಿ ಉಡುಪಿಯಲ್ಲಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಈ ನಡುವೆ ಕಾಪು, ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅವರ ಮೊಬೈಲ್ ನಂಬರ್ ಲೊಕೇಶನ್ ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಈ ಎರಡು ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂಬ ತಿಳಿದು ಬಂದಿದೆ.