ಕಾಪು:ಪಿಎಫ್ಐ ಮುಖಂಡರ ಮನೆಗೆ ದಾಳಿ, ಬಂಧನ ಖಂಡಿಸಿ ಕಾರ್ಯಕರ್ತರ ದಿಢೀರ್ ಪ್ರತಿಭಟನೆ

ಕಾಪು ಸೆ.22(ಉಡುಪಿ ಟೈಮ್ಸ್ ವರದಿ): ಇಂದು ಬೆಳಿಗ್ಗೆ ಪಿಎಫ್.ಐ ಮುಖಂಡರ ಮನೆ ಹಾಗೂ ಮೇಲೆ ನಡೆದಿರುವ ಎನ್.ಐ.ಎ ದಾಳಿಯನ್ನು ಖಂಡಿಸಿ ಪಿ ಎಫ್ ಐ ಕಾರ್ಯಕರ್ತರ ಕಾಪುವಿನಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು.

ಇಂದು ನಡೆದಿರುವ ಎನ್.ಐಎ ದಾಳಿ ಸಂಘಪರಿವಾರದ ಪ್ರೇರಣೆಯಿಂದ ನಡೆದಿದೆ. ರಾಜ್ಯದ ಹಲವು ಕಡೆಗಳಲ್ಲಿ ಪಿಎಫ್.ಐ ನ ನಾಯಕರ ಮನೆ ಹಾಗೂ ಕಚೇರಿಗಳಿಗೆ ಏಕಾಏಕಿ ದಾಳಿ ಮಾಡಿದ ಅಧಿಕಾರಿಗಳು ಯಾವುದೇ ವಿಚಾರದ ಬಗ್ಗೆ ಮಾಹಿತಿ ನೀಡದೆ ನಾಯಕರನ್ನು ಬಂಧಿಸಿದ್ದಾರೆ ಎಂದು ಆರೋಪಿಸಿದರು. ಹಾಗೂ ನಾಳೆ ಒಳಗೆ ಪಿಎಫ್ ಐ ನಾಯಕರನ್ನು ಬಿಡುಗಡೆ ಗೊಳಿಸದಿದ್ದಲ್ಲಿ ಮುಂದೆ ಇನ್ನೂ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ದಿಢೀರ್ ಪ್ರತಿಭಟನೆಗೆ ಇಳಿದ ಪಿಎಫ್ ಐ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲು ಯತ್ನಿಸಿದ್ದರು. ಈ ವೇಳೆ ಮಾಹಿತಿ ತಿಳಿದು ಸ್ಥಳಕ್ಕೆ ದೌಡಯಿಸಿದ ಕಾಪು ಪೊಲೀಸರು ಸೇರಿದ್ದ ಪಿಎಫ್ ಐ ಕಾರ್ಯಕರ್ತರ ಗುಂಪನ್ನು ಚದುರಿಸುವಲ್ಲಿ ಯಶಸ್ವಿಯಾದರು.

Leave a Reply

Your email address will not be published. Required fields are marked *

error: Content is protected !!