ಮಣಿಪಾಲ: ಮಾದಕ ವಸ್ತು ಸೇವನೆ ಪ್ರಕರಣ- ನಾಲ್ವರು ವಶಕ್ಕೆ

ಉಡುಪಿ ಸೆ.22(ಉಡುಪಿ ಟೈಮ್ಸ್ ವರದಿ): ಮಾದಕ ವಸ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿ ಸೆನ್ ಅಪರಾಧ ಪೊಲೀಸರು ಮಣಿಪಾಲ ಪರಿಸರದಲ್ಲಿ ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕರಣ್ ಆರ್ ಕೆ (21) , ಪೂರ್ಣ ಸೋಮೇಶ್ವರ (23), ನಿಯಾಲ್ ಗೋವೆಸ್ (20) , ಕೆನ್ನೆತ್ ಡಿ’ಸೋಜ (27) ಪೊಲೀಸರು ವಶಕ್ಕೆ ಪಡೆದ ಯುವಕರು.

ಈ ಬಗ್ಗೆ ಖಚಿತ ಮಾಹಿತಿ ಪಡೆದ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ನಾರಾಯಣ ಅವರು ಇತರ ಸಿಬ್ಬಂದಿಗಳೊಂದಿಗೆ ಮಣಿಪಾಲದ ವಿದ್ಯಾರತ್ನ ನಗರದ ರೊಯಲ್ ಎಂಬಸ್ಸಿ ಬಳಿಯ ಸಾರ್ವಜನಿಕ ಸ್ಥಳಕ್ಕೆ ತೆರಳಿ ಅಲ್ಲಿ ಮೇಲ್ನೋಟಕ್ಕೆ ಮಾದಕ ವಸ್ತು ಸೇವಿಸಿರುವಂತೆ ಕಂಡು ಬಂದ ಕರಣ್ ಆರ್ ಕೆ , ಪೂರ್ಣ ಸೋಮೇಶ್ವರ, ನಿಯಾಲ್ ಗೋವೆಸ್ , ಕೆನ್ನೆತ್ ಡಿ’ಸೋಜ ಎಂಬಾತನನ್ನು ಮಾದಕ ವಸ್ತು ಸೇವಿಸಿರುವ ಅನುಮಾದ ಮೇರೆಗೆ ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು.

ಈ ನಾಲ್ವರ ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ಗಾಂಜಾ ಸೇವಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ, ಇವರ ವಿರುದ್ಧ ಉಡುಪಿ ಸೆನ್ ಅಪರಧ ಪೊಲೀಸ್ ಠಾಣೆಯಲ್ಲಿ 4 ಪ್ರತ್ಯೇಕ ಪ್ರಕರಣ ದಾಖಲಾಗಿದೆ. 

Leave a Reply

Your email address will not be published. Required fields are marked *

error: Content is protected !!