ಪೇ ಸಿಎಂ ಪೋಸ್ಟರ್ ವೈರಲ್ ಆದ ಬೆನ್ನಲ್ಲೇ ಮತ್ತೊಂದು ಪೋಸ್ಟರ್ ಭಾರೀ ವೈರಲ್…!

ಬೆಂಗಳೂರು, ಸೆ.22 : ಪೇ ಸಿ ಎಂ( Pay CM ) ಪೋಸ್ಟರ್ ವೈರಲ್ ಆದ ಬೆನ್ನಲ್ಲೇ ಮತ್ತೊಂದು ಪೇ ಟೀಮ್ (Pay Team ) ಪೋಸ್ಟರ್ ಭಾರೀ ವೈರಲ್ ಆಗಿದೆ.

ಪೇ ಟಿಎಂ ಕ್ಯೂಆರ್ ಕೋಡ್ ಮಾದರಿಯಲ್ಲಿ ಕಾಂಗ್ರೆಸ್ ರಚಿಸಿದ `ಪೇಸಿಎಂ’ ಪೋಸ್ಟರ್ ಸದ್ದುಮಾಡುತ್ತಿರುವಾಗಲೇ ಆಮ್ ಆದ್ಮಿ ಪಾರ್ಟಿ(AAP) ಕೂಡ ಕ್ಯೂಆರ್ ಕೋಡ್ ಮಾದರಿಯ ಮೇ ಟೀಮ್  ಎಂಬ ಪೋಸ್ಟರ್ ನ್ನು ತಯಾರಿಸಿ ಸಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ವಿರುದ್ಧ ಟೀಕೆ ಮಾಡಿದೆ.

ಆಮ್ ಆದ್ಮಿ ಪಾರ್ಟಿಯು , ಸಿಎಂ ಬಸವರಾಜ ಬೊಮ್ಮಾಯಿಯವರಿದ್ದ ‘ಪೇಸಿಎಂ’ ಕ್ಯೂಆರ್ ಕೋಡ್ ಹಾಗೂ ಬಿಜೆಪಿಯವರು ಬಿಡುಗಡೆ ಮಾಡಿದ್ದ `ಪೇ ಎಕ್ಸ್ ಸಿಎಂ’ ಕ್ಯೂಆರ್ ಕೋಡ್ ಜೊತೆಗೆ ಜೆಡಿಎಸ್ ಚಿಹ್ನೆ ಕ್ಯೂಆರ್ ಕೋಡನ್ನೂ ಸೇರಿಸಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟರ್ ಬಿಡುಗಡೆ ಮಾಡಿದೆ. ಇದಕ್ಕೆ ಪೇ ಟೀಮ್ ಎಂಬ ಹೆಸರೂ ನೀಡಿದೆ.

ಈ ಬಗ್ಗೆ ಆಮ್ ಆದ್ಮಿ ಹಂಚಿಕೊಂಡಿರುವ ಟ್ವೀಟ್ ನಲ್ಲಿ “ಇದು Pay Cm ,Pay Ex CM  ಅಲ್ಲ, ಇದು ಜೆಸಿಬಿ ಪಾರ್ಟಿಗಳ # Pay Team. ಜೆಡಿಎಸ್ 10% ಕಾಂಗ್ರೆಸ್ 20% ಹಾಗೂ ಬಿಜೆಪಿ 40% ಉಳಿದ 30%  ಕಾಂಟ್ರಾಕ್ಟರ್ ಗಳಿಗೆ. ಇದರಿಂದ ಜನಸಾಮಾನ್ಯರಿಗೆ ಉಳಿದಿದ್ದು ಮೂರು ನಾಮ” ಎಂದು ಆಮ್ ಆದ್ಮಿ ಪಾರ್ಟಿಯು ಆಕ್ರೋಶ ವ್ಯಕ್ತಪಡಿಸಿದೆ.

Leave a Reply

Your email address will not be published. Required fields are marked *

error: Content is protected !!