ಕಾರ್ಕಳ: ದುಬಾರಿ ಗಿಫ್ಟ್, ಫೇಸ್ ಬುಕ್ ನಲ್ಲಿ ಇನ್ನೊಂದು ವಂಚನೆ ದೂರು!
ಉಡುಪಿ: ಪಡುಬಿದ್ರೆಯ ಉದ್ಯೋಗಿಯೊರ್ವರಿಗೆ ಫೇಸ್ ಬುಕ್‌ನಲ್ಲಿ ದುಬಾರಿ ಗಿಫ್ಟ್ ಆಸೆ ತೋರಿಸಿ ವಂಚಿಸಿದ ಘಟನೆ ಬೆಳಕಿಗೆ ಬರುತ್ತಿದ್ದಂತೆ, ಇನ್ನೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.
ಆದರೆ ಈ ಕೇಸಿನಲ್ಲಿ ಮಹಿಳೆಯೇ ವಂಚನೆಗೊಳಗಾದವಳು, ಕಾರ್ಕಳದ ಅಜೆಕಾರಿನ ಪೂರ್ಣಿಮ ಎಂಬವರೇ3 ಲಕ್ಷದ 90 ಸಾವಿರ ಹಣವನ್ನು ಕಳೆದುಕೊಂಡವರು ಉಡುಪಿ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಘಟನೆ ವಿವರ: ಡಾ. ಲಿವೀಸ್ ಎಂಬಾಕೆ ಆಗಸ್ಟ್ 4 ರಂದು ಪೂರ್ಣಿಮಗೆ ಪರಿಚಯವಾಗಿದ್ದು ತಾನು ತನ್ನ ಹುಟ್ಟು ಹಬ್ಬಕ್ಕೆ ಬೆಲೆ ಬಾಳುವ ಗಿಫ್ಟ್ ಪಾರ್ಸೆಲ್ ಕಳುಹಿಸುವುದಾಗಿ ನಂಬಿಸಿದ್ದು ಅದರಂತೆ ದೆಹಲಿಯಿಂದ ಪಾರ್ಸೆಲ್ ಆಪೀಸ್ ನಿಂದ ಎಂದು ಕರೆ ಮಾಡಿ ಬೆಲೆ ಯು.ಕೆ ಯಿಂದ ಬಾಳುವ ಪಾರ್ಸೆಲ್ ಬಂದಿದ್ದು ಅದನ್ನು ಕಳುಹಿಸಬೇಕಾದರೆ ರೂಪಾಯಿ 35 ಸಾವಿರ ಕಟ್ಟ ಬೇಕಾಗಿ ಹೇಳಿ, ಬ್ಯಾಂಕ್ ಖಾತೆ ವಿವರ ನೀಡಿದ್ದು, ಅದನ್ನು ನಂಬಿದ ಮಹಿಳೆ ಆ ಖಾತೆಗೆ ಹಣವನ್ನು ವರ್ಗಾಯಿಸಿದ್ದರು. ಬಳಿಕ ಆಗಸ್ಟ್ 11ರಂದು ಕರೆ ಮಾಡಿ ಪಾರ್ಸೆಲ್ ನಲ್ಲಿ ಪೌಂಡ್ ಇದೆ ಅದಕ್ಕೆ ದಾಖಲೆ ಮಾಡಬೇಕಾದರೆ ರೂಪಾಯಿ 95 ಸಾವಿರ ಹಣವನ್ನು ಕಟ್ಟಬೇಕು ಎಂದು ಹೇಳಿದಂತೆ ಮತ್ತೆ95000/- ಹಣವನ್ನು ಹೇಳಿದ ಖಾತೆಗೆ ಜಮಾ ಮಾಡಿದ್ದರು. ನಂತರ ರಿಸರ್ವ್ ಬ್ಯಾಂಕ್ ನಿಂದ ಎಂದು ಕರೆ ಮಾಡಿ ಕ್ಲಿಯರೆನ್ಸ್ ಬಗ್ಗೆ ಹಣ ಕಟ್ಟಬೇಕು ಎಂದು ಹೇಳಿ ಬ್ಯಾಂಕ್ ಖಾತೆ ವಿವರ ನೀಡಿದ್ದು, ಅದರಂತೆ ಆ ಖಾತೆಗೆ ಜಮಾ ಮಾಡಿದ್ದು, ನಂತರ ಯು.ಕೆ ಫೌಂಡನ್ನು ಇಂಡಿಯಾದ ರೂಪಾಯಿಗೆ ವರ್ಗಾಯಿಸಲು ರೂಪಾಯಿ 2ಲಕ್ಷದ 60 ಸಾವಿರ ಹಣ ಕಟ್ಟಬೇಕೆಂದು ಹೇಳಿ ಬ್ಯಾಂಕ್ ಖಾತೆ ವಿವರ ನೀಡಿದ್ದು, ಅದರಂತೆ ಆ ಖಾತೆಗೆ ಆ ಹಣವನ್ನು ಜಮಾ ಮಾಡಿದ್ದರು. ಆರೋಪಿಯು ಮಹಿಳೆಯಿಂದ 3 ಲಕ್ಷದ 90 ಸಾವಿರ ಹಣವನ್ನು ಮೋಸದಿಂದ ಬ್ಯಾಂಕ್ ಮೂಲಕ ಪಡೆದು, ಪಾರ್ಸೆಲ್ ಕಳುಹಿಸದೇ, ಹಣವನ್ನು ವಾಪಾಸು ನೀಡದೆ ಮೋಸ ಮಾಡಿದ್ದಾರೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ