ಉಡುಪಿ: ಖಾಸಗಿ ಬಸ್ ಗಳಲ್ಲಿ ಹಳೆ ದರವನ್ನೇ ಪಡೆಯಲು- ಸಾರಿಗೆ ಇಲಾಖೆ ಸೂಚನೆ
ಉಡುಪಿ ಸೆ.21(ಉಡುಪಿ ಟೈಮ್ಸ್ ವರದಿ): ಜಿಲ್ಲೆಯ ಖಾಸಗಿ ಸಿಟಿ ಬಸ್, ಎಕ್ಸ್‍ಪ್ರೆಸ್ ಹಾಗೂ ಷಟಲ್ ಬಸ್ ಗಳಲ್ಲಿ 2020ರ ಅ.13 ಮತ್ತು 2021 ರ ನ.10 ರಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ನಿಗದಿ ಪಡಿಸಿದ ದರವನ್ನೇ ಪ್ರಯಾಣಿಕರಿಂದ ಪಡೆಯಬೇಕು ಎಂದು ಜಿಲ್ಲೆಯ ಎಲ್ಲಾ ಬಸ್ ಮಾಲಕರಿಗೆ ಜಿಲ್ಲಾ ಪ್ರಾದೇಶಿಕ ಸಾರಿಗೆ ಇಲಾಖೆ ಸೂಚನೆ ನೀಡಿದೆ.
ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಮಜಲು ವಾಹನ ಪ್ರಯಾಣದ ದರವನ್ನು ಪರಿಷ್ಕರಿಸಿ ನಿಗದಿ ಪಡಿಸಿದ ದರವು ಜಾರಿಯಲ್ಲಿ ಇದ್ದರೂ ಕೆಲವು ಬಸ್ ಗಳಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ಪ್ರಯಾಣದರವನ್ನು ಪಡೆಯುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಪ್ರಧಿಕಾರಿ ಈ ಸೂಚನೆ ಹೊರಡಿಸಿದೆ.
ಅದರಂತೆ ಖಾಸಗಿ ಸಿಟಿ, ಎಕ್ಸ್‍ಪ್ರೆಸ್ ಹಾಗೂ ಷಟಲ್ ಬಸ್ ಗಳಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು 2020ರ ಅ.13 ಮತ್ತು 2021 ರ ನ.10 ರಂದು ನಿಗದಿ ಪಡಿಸಿದ ದರವನ್ನೇ ಪ್ರಯಾಣಿಕರಿಂದ ಪಡೆಯಬೇಕು ಎಂದು ಜಿಲ್ಲೆಯ ಎಲ್ಲಾ ಬಸ್ಸು ಮಾಲಕರಿಗೆ ಆದೇಶಿಸಿದೆ ಹಾಗೂ ಈ ನಿಯಮ ತಪ್ಪಿದ್ದಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಭಾರ ಅಧಿಕಾರಿ ರವಿಶಂಕರ ಪಿ. ಅವರು ಆದೇಶದಲ್ಲಿ ತಿಳಿಸಿದ್ದಾರೆ.