ಕಾರ್ಕಳ: ಅಡುಗೆ ಕೋಣೆಯಲ್ಲಿ ಕುಸಿದು ಬಿದ್ದು ವ್ಯಕ್ತಿ ಮೃತ್ಯು

ಕಾರ್ಕಳ ಸೆ.21(ಉಡುಪಿ ಟೈಮ್ಸ್ ವರದಿ): ತಾಲೂಕಿನ ಸೂಡ ಗ್ರಾಮದಲ್ಲಿ ಅಡುಗೆ ಕೋಣೆಯಲ್ಲಿ ಕುಸಿದು ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.

ಸೂಡ ಗ್ರಾಮದ ಪೆರ್ನಾಲ್ ನಿವಾಸಿ ಫೆಲಿಕ್ಸ್ ನಜರತ್ (59) ಮೃತಪಟ್ಟವರು. ಕಾಲು ನೋವಿನಿಂದ ಬಳಲುತ್ತಿದ್ದ ಫೆಲಿಕ್ಸ್ ನಜರತ್ ಅವರು, ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು. ಪತ್ನಿ ಸಂಧಿವಾತದಿಂದ ಬಳಲುತ್ತಿದ್ದು, ಆಕೆಯ ತಾಯಿ ಮನೆಯಾದ ಶಿರ್ವದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಸೆ.20 ರಂದು ಮನೆಯ ಅಡಿಗೆ ಕೋಣೆಯ ನೆಲದಲ್ಲಿ ಕುಸಿದುಬಿದ್ದಿದ್ದ ಫೆಲಿಕ್ಸ್ ನಜರತ್ ಅವರನ್ನು ಪರೀಕ್ಷಿಸಿ ನೋಡಿದಾಗ ಅವರು ಮೃತಪಟ್ಟಿರುವುದು ತಿಳಿದು ಬಂದಿದೆ. ಈ ಬಗ್ಗೆ ಮೃತರ ಮಗ ಫ್ರೆನ್ಸಿಟಾ ನಜರತ್ ಎಂಬವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Leave a Reply

Your email address will not be published. Required fields are marked *

error: Content is protected !!