ಹೆಬ್ರಿ: ಚಾರ ಗ್ರಾಮ ಪಂಚಾಯಿತ್’ನಲ್ಲಿ ಅಗ್ನಿ ಅವಘಡ- ಸುಟ್ಟು ಕರಕಲಾದ ದಾಖಲೆ ಪತ್ರ
ಹೆಬ್ರಿ: ತಾಲ್ಲೂಕಿನ ಚಾರ ಗ್ರಾಮ ಪಂಚಾಯಿತಿಯಲ್ಲಿ ಕಳೆದ ರಾತ್ರಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು ದಾಖಲೆಗಳು ಸಂಪೂರ್ಣವಾಗಿ ಸುಟ್ಟು ಹೋಗಿದೆ. ಅಪಾರ ಪ್ರಮಾಣದ ನಷ್ಟವಾಗಿದೆ.
ಮುಂಜಾನೆ ಪಂಚಾಯಿತಿ ಕಟ್ಟಡದಿಂದ ಹೊಗೆ ಬರುತ್ತಿರುವುದನ್ನು ಕಂಡ ಸ್ಥಳೀಯರು ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಮಾಹಿತಿ ನೀಡಿದ್ದರು. ಬಳಿಕ ಪಂಚಾಯಿತಿ ಅಧ್ಯಕ್ಷೆ ಕುಸುಮಾ ಪ್ರಭು ಹಾಗೂ ಸಿಬ್ಬಂದಿಗಳು ಪಂಚಾಯಿತಿಯ ಬಾಗಿಲನ್ನು ತೆರೆದು ನೋಡಿದಾಗ ಕಟ್ಟಡದ ಒಳಗಡೆಯಿರುವ ರೆಕಾರ್ಡ್ ರೂಮಿನಲ್ಲಿ ಬೆಂಕಿ ಹತ್ತಿರುವುದನ್ನು ಕಂಡು ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸಲಾಯಿತು.
ಅವಘಡದಿಂದ ಪಂಚಾಯಿತಿ ನಲ್ಲಿರುವ ದಾಖಲೆ ಪತ್ರಗಳು ಸಂಪೂರ್ಣ ಸುಟ್ಟು ಹೋಗಿದೆ. ಪೀಠೋಪಕರಣ ಕಂಪ್ಯೂಟರ್ ಗಳು ಸುಟ್ಟುಹೋಗಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಅವಘಡದಿಂದ ಸಂಭವಿಸಿದೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು. ನಮ್ಮ ಪಂಚಾಯಿತಿಗೆ ಅಪಾರ ನಷ್ಟವಾಗಿದೆ ಎಂದು ಪಂಚಾಯಿತಿ ಅಧ್ಯಕ್ಷೆ ಕುಸುಮಾ ಪ್ರಭು ತಿಳಿಸಿದ್ದಾರೆ.
ಹೆಬ್ರಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಶಿಧರ ಕೆ. ಜಿ. ಮಾತನಾಡಿ ಮೇಲ್ನೋಟಕ್ಕೆ ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಈ ಅವಘಡ ಸಂಭವಿಸಿದೆ ಎಂದು ಗೊತ್ತಾಗಿದೆ. ಆದರೆ, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದರು .
ಅಪಾರ ಪ್ರಮಾಣದಲ್ಲಿ ದಾಖಲಾತಿಗಳು ಸುಟ್ಟು ಹೋದ ಕಾರಣ ಗ್ರಾಮಸ್ಥರು ಈಗ ಆತಂಕಕ್ಕೀಡಾಗಿದ್ದಾರೆ .ಹೆಬ್ರಿ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು, ಮೆಸ್ಕಾಂ ಅಧಿಕಾರಿಗಳು ಸ್ಥಳದಲ್ಲಿದ್ದಾರೆ.
2 ವರ್ಷದ ಹಿಂದೆ ಕಟ್ಟಿದ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣ ಮಾಡುವಾಗ ಕಳಪೆ ಮಟ್ಟದ ಉಪಕರಣಗಳನ್ನು ಹಾಕಿದ್ದರಿಂದ ಇದು ಆಗಿದೆ ಎನ್ನುವ ಅನುಮಾನವಿದೆ ಈ ಬಗ್ಗೆ ತನಿಖೆ ನಡೆಸಬೇಕು ಹಾಗೂ ಸಾರ್ವಜನಿಕರ ದಾಖಲಾತಿ ಪತ್ರಗಳು ಸುಟ್ಟು ಹೋಗಿದೆ ಇದಕ್ಕೆ ಹೊಣೆಗಾರರು ಯಾರು ಸ್ಥಳೀಯರು ದೂರಿದ್ದಾರೆ.