ರಂಗಚಟುವಟಿಕೆಯಿಂದ ವಿದ್ಯಾರ್ಥಿಗಳ ಆತ್ಮಸ್ಥೈರ್ಯ ಹೆಚ್ಚುತ್ತದೆ: ಡಾ.ನಿ.ಬಿ. ವಿಜಯ ಬಲ್ಲಾಳ್
ವಿದ್ಯೆಯನ್ನು ಸ್ಪರ್ಧೆ,ಸವಾಲುಗಳ ಮಧ್ಯೆ ಪಡೆದುಕೊಳ್ಳಬೇಕಾದ ಇಂದಿನ ದಿನದಲ್ಲಿ ಕಲಿಕೆಗೆ ಮತ್ತು ಬದುಕಿಗೆ ಪೂರಕವಾದ ಆತ್ಮಸ್ಥೈರ್ಯದಂತಹ ಅನೇಕ ಪೂರಕ ಅಂಶಗಳು ರಂಗಚಟುವಟಿಕೆಗಳಿಂದ ಹೆಚ್ಚುತ್ತದೆ ಎಂದು ಅಂಬಲಪಾಡಿ ಜನಾರ್ಧನ ಮಹಕಾಳಿ ದೇವಳದ ಧರ್ಮದರ್ಶಿ ಡಾ.ನಿ.ಬಿ.ವಿಜಯ ಬಲ್ಲಾಳ್ರವರು ನುಡಿದರು.ಶ್ರೀಯತರು ಕರ್ನಾಟಕ ನಾಟಕ ಅಕಾಡೆಮಿ ,ಬೆಂಗಳೂರು, ಸಾರ್ವಜನಿಕ ಶಿಕ್ಷಣ ಇಲಾಖೆ,ಉಡುಪಿ ಜಿಲ್ಲೆ,ಹಾಗೂ ಸುಮನಸಾ ಕೊಡವೂರು-ಉಡುಪಿ ಆಯೋಜಿಸಿದ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಉಡುಪಿ ಜಿಲ್ಲಾ ಮಟ್ಟದ ನಾಟಕ ಸ್ಪರ್ಧೆಯ ಉದ್ಘಾಟನೆಯನ್ನು ನೆರವೇರಿಸಿ ತರುಣಾವಸ್ಥೆಯ ವಿದ್ಯಾರ್ಥಿಗಳು ಸಕರಾತ್ಮಕ ಗುಣವನ್ನು ಬೆಳೆಸುವಲ್ಲಿ ಮತ್ತು ಆದರ್ಶ ವಿದ್ಯಾರ್ಥಿಯ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ನಾಟಕಗಳು ಮಾಡುತ್ತದೆ.ಅಲ್ಲದೆ ಉತ್ತಮ ಸಂಸ್ಕಾರದೊಂದಿಗೆ ಭೌತಿಕ ,ಮಾನಸಿಕ ಸದೃಢತೆಗೂ ಕಾರಣವಾಗುತ್ತದೆ.ಈ ನಾಟಕ ಸ್ಪರ್ಧೆಯ ಆಯೋಜನೆಗೆ ನಾಟಕ ಅಕಾಡೆಮಿ ಸದಸ್ಯರಾದ ಪ್ರದೀಪ್ಚಂದ್ರ ಕುತ್ಪಾಡಿಯವರ ವಿಶೇಷ ಪಾತ್ರಕ್ಕೆ ಅಭಿನಂದನೆಯನ್ನು ಸಲ್ಲಿಸುತ್ತೇನೆ.ಹಾಗೂ ಸ್ಪರ್ಧಾಕೂಟಕ್ಕೆ ಸಂಪೂರ್ಣ ಸಹಯೋಗ ನೀಡಿರುವ ಹೆಸರಾಂತ ರಂಗತಂಡ ಸುಮನಸಾ ಕೊಡವೂರು ಬಳಗಕ್ಕೆ ಅಂಬಲಪಾಡಿ ತಾಯಿಯ ಸಾನಿಧ್ಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಸ್ಪರ್ಧಾ ಕೂಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಉದ್ಯಮಿ ಶೇಖರ್ ಕೋಟ್ಯಾನ್ರವರು ಸ್ಪರ್ಧಾ ಚಟುವಟಿಕೆಗಳು ಕ್ರಿಯಾಶೀಲತೆ ಮತ್ತು ಪ್ರತಿಭಾ ವಿಕಸನಕ್ಕೆ ಸಹಕಾರಿಯಾಗುತ್ತದೆ ಎಂದರು.ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕರಾದ ಶಿವರಾಜ್ ಎನ್.ಕೆ,ಉದ್ಯಮಿಗಳಾದ ಅನ್ಸರ್ ಮಲ್ಪೆ,ಎಎಪ್ಟಿ,ನಾಟಕ ಅಕಾಡೆಮಿ ಸದಸ್ಯರಾದ ಪ್ರದೀಪ್ಚಂದ್ರ ಕುತ್ಪಾಡಿ,ಮಲ್ಪೆ ಸರಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ಸಂಧ್ಯಾ,ಸುಮನಸಾ ಅಧ್ಯಕ್ಷರಾದ ಪ್ರಕಾಶ್ ಜಿ ಕೊಡವೂರು ಉಪಸ್ಥಿತರಿದ್ದರು.
ಪ್ರಕಾಶ್ ಜಿ ಕೊಡವೂರು ಸ್ವಾಗತಿಸಿದರು, ಪ್ರದೀಪ್ಚಂದ್ರ ಕುತ್ಪಾಡಿ ಪ್ರಸ್ತಾವಿಸಿದರು.ಸುಮನಸಾ ಕಾರ್ಯದರ್ಶಿ ಚಂದ್ರಕಾಂತ್ ಕುಂದರ್ ಧನ್ಯವಾದ ಸಲ್ಲಿಸಿದರು.
ಯೋಗೀಶ್ ಕೊಳಲಗಿರಿ ನಿರೂಪಿಸಿದರು.