ವಿಮಾನ ಪ್ರಯಾಣ: ನಿಯಮ ಸಡಿಲಿಸಿದ ಕೇಂದ್ರ ಸರ್ಕಾರ

ನವದೆಹಲಿ: ಕೊರೊನಾ ಸಂಕಷ್ಟದಿಂದ ಪ್ರಯಾಣಿಕರಿಗೆ ಕಠಿಣ ನಿಯಮಗಳನ್ನು ವಿಧಿಸಿದ್ದ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಮೂರು ತಿಂಗಳ ಬಳಿಕ ನಿಯಮಗಳನ್ನು ಸ್ವಲ್ಪ ಬದಲಿಸಿದೆ.

ಪ್ರಯಾಣದ ವೇಳೆ ಉಪಹಾರ ನೀಡಲು ಅವಕಾಶ ನೀಡಿದ್ದು ಪ್ಯಾಕಿಂಗ್ ನಲ್ಲಿರುವ ತಿಂಡಿ – ತಿನಿಸು, ಊಟ ಮತ್ತು ತಂಪು ಪಾನೀಯಗಳನ್ನು ದೇಶಿಯ ವಿಮಾನಗಳ ಹಾರಾಟದ ವೇಳೆ ನೀಡಬಹುದು. ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಮಾತ್ರ ಬಿಸಿ ಊಟ, ಪಾನೀಯ ನೀಡಬಹುದು ಎಂದು ತಿಳಿಸಿದೆ.

ಆಹಾರ ನೀಡುವ ವೇಳೆ ಎಚ್ಚರಿಕೆ ವಹಿಸಬೇಕು. ಕೈಗಳಿಗೆ ಗ್ಲೌಸ್ ಹಾಕಿರಬೇಕು. ಟೀ, ಕಾಫಿ, ನೀರು, ತಂಪು ಪಾನೀಯಗಳನ್ನು ಬಳಸಿ ಬಿಸಾಡುವ ಕಪ್ ಗಳಲ್ಲಿ ಮಾತ್ರ ನೀಡಬೇಕು. ಪ್ರಯಾಣಿಕರಿಗೆ ನೀಡುವ ಊಟದ ಟ್ರೇ ಸೆಟಪ್ ಗಳನ್ನು ಮತ್ತೆ ಬಳಸದಂತೆ ಎಚ್ಚರಿಕೆ ನೀಡಿದೆ.

ಪ್ರಯಾಣಿಕರಿಗೆ ಇಯರ್ ಫೋನ್ ನೀಡಿದ್ದಲ್ಲಿ ಅದನ್ನು ಮರುಬಳಕೆ ಮಾಡುವಂತಿಲ್ಲ, ಮಾಸ್ಕ್ ಧರಿಸದೇ ಬರುವ ಪ್ರಯಾಣಿಕರನ್ನು ನೋ ಪ್ಲೇ ಪಟ್ಟಿಗೆ ಸೇರಿಸಲು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ. ಈ ಹಿಂದೆ ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಪ್ಯಾಕಿಂಗ್ ಊಟಕ್ಕೆ ಮಾತ್ರ ಅವಕಾಶ ಇದ್ದರೆ ದೇಶಿಯ ವಿಮಾನಗಳಲ್ಲಿ ತಿಂಡಿ ತಿನಿಸು ಊಟಕ್ಕೆ ಅವಕಾಶ ನಿರಾಕರಿಸಲಾಗಿತ್ತು.

Leave a Reply

Your email address will not be published. Required fields are marked *

error: Content is protected !!