ಕೋಮುಗಲಭೆಗೆ ದ.ಕ, ರೌಡಿಸಂಗೆ ಉಡುಪಿ ಜಿಲ್ಲೆ ನಂಬರ್ ಒನ್…

ಬೆಂಗಳೂರು ಸೆ.19: ಕೋಮುಗಲಭೆಯಲ್ಲಿ ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳು ಮೊದಲೆರಡು ಸ್ಥಾನ ಪಡೆದಿದೆ ಎಂಬ ಆಘಾತಕಾರಿ ಅಂಶವೊಂದು ವರದಿಯೊಂದರಿಂದ ತಿಳಿದು ಬಂದಿದೆ.

ಕಳೆದ ಐದು ವರ್ಷಗಳಲ್ಲಿ ಪ್ರಕರಣ ಆಧರಿಸಿ ಈ ವರದಿಯನ್ನ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು, ಈ ವರದಿಯ ಪ್ರಕಾರ, ರಾಜ್ಯದಲ್ಲಿ ಒಟ್ಟು 242 ಕೋಮುಗಲಭೆ ಕೇಸ್ ದಾಖಲಾಗಿದ್ದು, ಇದರಲ್ಲಿ ದಕ್ಷಿಣ ಕನ್ನಡ 57, ಶಿವಮೊಗ್ಗ 48 ಕೇಸ್ ದಾಖಲಾಗಿದೆ. ಹಾಗೂ ಬಾಗಲಕೋಟೆ 28, ದಾವಣಗೆರೆ 18, ಹಾವೇರಿ 18 ಕೋಮುಗಲಭೆ ಪ್ರಕರಣಗಳು ನಡೆದಿವೆ. ಹಾಗೂ ರೌಡಿಸಂನಲ್ಲಿ ಉಡುಪಿ, ಕೋಲಾರ ಅಗ್ರಸ್ಥಾನ ಪಡೆದಿದ್ದು, ಇನ್ನೂ ರೌಡಿಸಂ ನ ಕುರಿತ ದಾಖಲಾದ ಒಟ್ಟು 1431 ಪ್ರಕರಣಗಳಲ್ಲಿ ಉಡುಪಿಯಲ್ಲಿ 421 ಪ್ರಕರಣ ದಾಖಲಾಗಿದ್ದು, ನಂತರದ ಸ್ಥಾನದಲ್ಲಿ ಕೋಲಾರದಲ್ಲಿ 165, ದಕ್ಷಿಣಕನ್ನಡ 152, ಬೆಂಗಳೂರು ನಗರ 80, ಕಲಬುರಗಿ 97, ಶಿವಮೊಗ್ಗದಲ್ಲಿ 158 ಪ್ರಕರಣ ಗಳು ದಾಖಲಾಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದರ ಜೊತೆಗೆ ಮೂರು ವರ್ಷದಲ್ಲಿ 4 ಮತೀಯ ಕೊಲೆ ಆಗಿದ್ದು, ಗಲಭೆಯಲ್ಲಿ 280 ಪೊಲೀಸರಿಗೆ ದೈಹಿಕ ಹಾನಿಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 

Leave a Reply

Your email address will not be published. Required fields are marked *

error: Content is protected !!