ಬ್ರಹ್ಮಾವರ ಸತ್ಯನಾಥ ಸ್ಟೋರ್ಸ್- ನವರಾತ್ರಿ ಪ್ರಯುಕ್ತ “ವಸ್ತ್ರೋತ್ಸವ”
ಉಡುಪಿ ಸೆ.19(ಉಡುಪಿ ಟೈಮ್ಸ್ ವರದಿ): ಬ್ರಹ್ಮಾವರದ ಪ್ರಸಿದ್ಧ ವಸ್ತ್ರ ಮಳಿಗೆಯಾದ “ಸತ್ಯನಾಥ ಸ್ಟೋರ್ಸ್” ನಲ್ಲಿ ನವರಾತ್ರಿ ಪ್ರಯುಕ್ತ ಗ್ರಾಹಕರಿಗಾಗಿ ವಸ್ತ್ರೋತ್ಸವ ಎಂಬ ವಿಶೇಷ ವಸ್ತ್ರಗಳ ಪ್ರದರ್ಶನ ಮತ್ತು ಮರಾಟವನ್ನು ಆಯೋಜಿಸಲಾಗಿದೆ.
ಈ ವಿಶೇಷ ಕೊಡುಗೆಯು ಸೆ.26 ರಿಂದ ಆರಂಭಗೊಳ್ಳಲಿದ್ದು ಅ.6 ರ ವರೆಗೆ ಲಭ್ಯವಿರಲಿದೆ. ಈ ವಿಶೇಷ ಕೊಡುಗೆಯಲ್ಲಿ ಮದುವೆ ಸೀರೆಗಳು, ಕಾಟನ್ ಸೀರೆಗಳು, ರೇಷ್ಮೇ ಸೀರೆ, ಫ್ಯಾನ್ಸಿ ಸೀರೆ, ಲೆಹೆಂಗಾ , ಚೂರಿದಾರ್ ಮಕ್ಕಳ ಸಾಂಪ್ರದಾಯಿಕ ಹಾಗೂ ಆಧುನಿಕ ಶೈಲಿಯ ಬಟ್ಟೆಗಳು, ಪುರುಷರ ಬ್ರಾಂಡೆಡ್ ಪ್ಯಾಂಟ್, ಶರ್ಟ್ ಮತ್ತು ಟೀ ಶರ್ಟ್ ಗಳ ವಿಶೇಷ ಮಾರಾಟ ಮತ್ತು ಪ್ರದರ್ಶನ ನೆಡಲಿದೆ.
ಇದರ ಜೊತೆಗೆ ಕಲ್ಕತ್ತಾ ಫ್ಯಾನ್ಸಿ ಸೀರೆಗಳ ಮೇಲೆ ವಿಶೇಷ ರಿಯಾಯ್ತಿಯನ್ನು ನೀಡಲಾಗಿದೆ.
ಇಲ್ಲಿ ವಿವಿಧ ಬ್ರಾಂಡ್ ನ ವಸ್ತ್ರಗಳು ಲಭ್ಯವಿದ್ದು, ಈ ಕೊಡುಗೆ ಬ್ರಹ್ಮಾವರದ ಸತ್ಯನಾಥ ಸ್ಟೋರ್ ನಲ್ಲಿ ಮಾತ್ರ ಗ್ರಾಹಕರಿಗಾಗಿ ದೊರೆಯಲಿದೆ. ಹೆಚ್ಚಿನ ಮಾಹಿತಿಗಾಗಿ 9742561049 ಸಂಪರ್ಕಿಸುವಂತೆ ಸಂಸ್ಥೆಯ ಮಾಲಕರು ಮಾಹಿತಿ ನೀಡಿದ್ದಾರೆ.