ಬೈಂದೂರು: ಬಿಜೆಪಿ ತ್ರಾಸಿ ಶಕ್ತಿ ಕೇಂದ್ರದ ಸಭೆ
ಉಡುಪಿ ಸೆ.19(ಉಡುಪಿ ಟೈಮ್ಸ್ ವರದಿ): ಬೈಂದೂರು ಮಂಡಲ ವ್ಯಾಪ್ತಿಯ ತ್ರಾಸಿ ಶಕ್ತಿ ಕೇಂದ್ರದ ಸಭೆ ಭಾನುವಾರ ನಡೆದಿದ್ದು, ಸಭೆಯನ್ನು ಜಿಲ್ಲಾ ಅಲ್ಪ ಸಂಖ್ಯಾತ ಮೋರ್ಚಾ ಅಧ್ಯಕ್ಷರಾದ ದಾವೂದ್ ಅಬೂಬಕ್ಕರ್ ಉದ್ಘಾಟಿಸಿದರು.
ಈ ವೇಳೆ ಬೂತ್ ಸಶಕ್ತಿಕರಣ ಕಾರ್ಯಕ್ರಮದಂತೆ ಶಕ್ತಿ ಕೇಂದ್ರ ವ್ಯಾಪ್ತಿಯ ಬೂತ್ ಗಳ ಪರಿಶೀಲನೆ ಮಾಡಿ ಪಂಚರತ್ನ ಸಮಿತಿ, ಪೇಜ್ ಸಮಿತಿ, ಕೀ ವೋಟರ್ ಪಟ್ಟಿ, ಫಲನುಭವಿಗಳ ಪಟ್ಟಿಗಳನ್ನು ಪರಿಶೀಲಿಸಿ ಪಕ್ಷದ ಸಂಘಟನಾತ್ಮಕ ವಿಚಾರಗಳನ್ನು ತಿಳಿಸಿದರು. ಹಾಗೂ ಸೆ.17 ರಿಂದ ಅ.2 ರ ವರೆಗೆ ನಡೆಯುವ “ಸೇವಾ ಪಾಕ್ಷಿಕ” ಕಾರ್ಯಕ್ರಮ ವನ್ನು ಯಶಸ್ವಿ ಗೊಳಿಸುವಂತೆ ಕರೆ ನೀಡಿದರು.
ಇದೇ ವೇಳೆ ಮೋದಿಯವರ ಜನ್ಮ ದಿನಾಚರಣೆಯನ್ನು ಆಚರಿಸಿ ಸಿಹಿ ತಿಂಡಿಯನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶಕ್ತಿಕೇಂದ್ರ ಅಧ್ಯಕ್ಷ ಮಿಥುನ್ ದೇವಾಡಿಗ, ಮಹಾ ಶಕ್ತಿ ಕೇಂದ್ರ ಅಧ್ಯಕ್ಷ ರವಿ ಶೆಟ್ಟಿಗಾರ್, ಉಡುಪಿ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್ ಆತ್ರಾಡಿ, ಬೂತ್ ಸಮಿತಿ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಪಂಚಾಯತ್ ಸದಸ್ಯರು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.