ಉಡುಪಿ: ಫೇಸ್‌ಬುಕ್ ನಲ್ಲಿ ಪರಿಚಯವಾದ ಮಹಿಳೆ, ಲಕ್ಷಾಂತರ ರೂ.ಕಳಕೊಂಡ!

ಉಡುಪಿ: ಫೇಸ್‌ಬುಕ್ ನಲ್ಲಿ ಪರಿಚಯವಾದವಳು ಹುಟ್ಟುಹಬ್ಬಕ್ಕೆ ಉಡುಗೊರೆ ನೀಡುವಳೆಂದು ನಂಬಿ ವ್ಯಕ್ತಿಯೊಬ್ಬರು ಲಕ್ಷಾಂತರ ರೂ. ಕಳೆದುಕೊಂಡ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಡುಬಿದ್ರೆಯ ಡೇವಿಡ್ ಪೌಲ್‌ ಕುಮಾರ್‌ (53) ಎಂಬವರು ಮುಲ್ಕಿಯ ಕೊಲ್ನಾಡ್‌ ನಲ್ಲಿರುವ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಇವರಿಗೆ ಆ.24ರಂದು ಫೇಸ್‌ಬುಕ್ ನಲ್ಲಿ ಜೊನ್ ಶಕ್ತಿ ಮಾಕ್ಸ್‌ವೆಲ್ ಎಂಬ ಮಹಿಳೆಯ ಪರಿಚಯವಾಗಿತ್ತು.  ಮಹಿಳೆ ಡೇವಿಡ್ ಪೌಲ್ ಅವರನ್ನು ನಂಬಿಸಿ ಹುಟ್ಟುಹಬ್ಬಕ್ಕೆ ಬೆಲೆ ಬಾಳುವ ಉಡುಗೊರೆ ಪಾರ್ಸೆಲ್ ಕಳುಹಿಸುವುದಾಗಿ ಹೇಳಿದ್ದರು. ಅದರಂತೆ ದೆಹಲಿ ಏರ್‌ಪೋರ್ಟಿನಿಂದ ಹೇಳಿಕೊಂಡು ಮಹಿಳೆಯೊಬ್ಬರು ಕರೆ ಮಾಡಿ, ವಿದೇಶದಿಂದ ಬಂದಿರುವ ಪಾರ್ಸೆಲ್ ಪಡೆಯಲು 58,000ರೂ. ಪಾವತಿಸಬೇಕೆಂದು ಹೇಳಿದ್ದಾರೆ, ಅದರಂತೆ ಡೇವಿಡ್, ಅವರ ಬ್ಯಾಂಕ್ ಖಾತೆಗೆ ಆ ಹಣವನ್ನು ಪಾವತಿಸಿದ್ದರು.

ಅದರ ನಂತರ ಆದಾಯ ತೆರಿಗೆ ಅಧಿಕಾರಿ ಹೇಳಿಕೊಂಡು ಕರೆ ಮಾಡಿ, ಹಣ ಪಾವತಿಸಲು ಹೇಳಿದ್ದಾರೆ, ಅದರಂತೆ ಡೇವಿಡ್ 2,95,000ರೂ. ಹಣವನ್ನು ತನ್ನ ಖಾತೆಯಿಂದ ವರ್ಗಾಯಿಸಿದ್ದರು. ಹೀಗೆ ಇವರಿಂದ ಒಟ್ಟು 3,53,000ರೂ. ಹಣವನ್ನು ಮೋಸದಿಂದ ಬ್ಯಾಂಕ್ ಮೂಲಕ ಪಡೆದು, ಉಡುಗೊರೆಯ ಪಾರ್ಸೆಲ್ ನೀಡದೆ ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!