ಉದ್ಯಾವರ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷರಾಗಿ ರಿಯಾಝ್ ಪಳ್ಳಿ ಪುನರಾಯ್ಕೆ
ಉದ್ಯಾವರ: ಉದ್ಯಾವರ ಫ್ರೆಂಡ್ಸ್ ಸರ್ಕಲ್ ಇದರ 2022- 2023 ಸಾಲಿನ ಅಧ್ಯಕ್ಷರಾಗಿ ಗ್ರಾಮ ಪಂಚಾಯತ್ ಸದಸ್ಯ ರಿಯಾಝ್ ಪಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ತಿಲಕ್ರಾಜ್ ಸಾಲ್ಯಾನ್ ಪುನರಾಯ್ಕೆಗೊಂಡರು.
ಇನ್ನಿತರ ಪದಾಧಿಕಾರಿಗಳು: ಗೌರವಾಧ್ಯಕ್ಷರಾಗಿ ಉದ್ಯಾವರ ನಾಗೇಶ್ ಕುಮಾರ್, ಉಪಾಧ್ಯಕ್ಷರಾಗಿ ಸೋಮಶೇಖರ ಸುರತ್ಕಲ್, ಮೇರಿ ಡಿ’ಸೋಜಾ, ಕಾರ್ಯದರ್ಶಿಯಾಗಿ ಸುಗಂಧಿ ಶೇಖರ್, ಹಮೀದ್ ಸಾಬ್ಜಾನ್ ಕೋಶಾಧಿಕಾರಿಗಳಾಗಿ ಗಿರೀಶ್ ಗುಡ್ಡೆಯಂಗಡಿ, ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀಧರ ಗಣೇಶ್ನಗರ, ಸಂಘಟನಾ ಕಾರ್ಯದರ್ಶಿಗಳಾಗಿ ಯು.ಆರ್.ಚಂದ್ರಶೇಖರ್, ಮಹಮ್ಮದ್ ಆಲಿ, ಆಂತರಿಕ ಲೆಕ್ಕ ಪರಿಶೋಧಕರಾಗಿ ಹಬೀಬ್ ಪಳ್ಳಿ ಆಯ್ಕೆಯಾಗಿದ್ದಾರೆ.