ಸಾಮಾಜಿಕ ಬದ್ಧತೆಗೆ ಇನ್ನೊಂದು ಹೆಸರು ಮಂಜುನಾಥ ಉದ್ಯಾವರ್: ದಿನೇಶ್ ಪುತ್ರನ್
ಉಡುಪಿ: (ಉಡುಪಿ ಟೈಮ್ಸ್ ವರದಿ) ಎಲ್ಲರಿಗೂ ಒಂದು ಕೆಲಸವನ್ನು ಬದ್ದತೆಯ ನೆಲೆಯಲ್ಲಿ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಮಂಜುನಾಥ ಉದ್ಯಾವರ್ ಅವರು ಎಲ್ಲಾ ಕೆಲಸಗಳು ಅದು ರಾಜಕೀಯವಾಗಿರಲಿ ಅಥವಾ ಸಾಮಾಜಿಕವಾಗಿರಲಿ ಅದೊಂದು ನನ್ನ ಕಮಿಟ್‍ಮೆಂಟ್ ಏನಾದ್ರೂ ಆಗಲಿ ನಾನು ಅದನ್ನು ಮಾಡಬೇಕು ಎಂಬ ಬದ್ದತೆಯಿಂದ ಅವರು ಕೆಲಸ ಮಾಡುತ್ತಿದ್ದರು ಹಾಗಾಗಿ ಅವರು ಇಲ್ಲದೆ ಎಂಟು ವರ್ಷಗಳು ಸಂದರೂ ಇಂದಿಗೂ ಕೂಡಾ ಅವರು ಪ್ರಸ್ತುತರು. ಯುವ ಮನಸ್ಸುಗಳನ್ನು ಅರಳಿಸಿ ಒಗ್ಗೂಡಿಸುವುದರಲ್ಲಿ ಅವರು ಸಿದ್ಧಹಸ್ತರು.
ನಾನು ವಿದ್ಯಾರ್ಥಿ ಕಾಂಗ್ರೆಸ್‍ನ ಮುಂಚೂಣಿಯಲ್ಲಿದ್ದಾಗ ನನ್ನನ್ನು ಬೆಳೆಸುವಲ್ಲಿ ಸಾಕಷ್ಟು ಸಹಾಯ ಮಾಡಿದ ಮಂಜುನಾಥ ಉದ್ಯಾವರ್ ಅವರು ನಾವು ಆಯೋಜಿಸಿದ ರಾಜ್ಯಮಟ್ಟದ ಕ್ರೀಡಾಕೂಟ ಯಶಸ್ವಿಯಾಗುವುದರ ಹಿಂದೆ ಇದ್ದ ದೊಡ್ಡ ಶಕ್ತಿ ಅವರೇ ಆಗಿದ್ದರು. ಎಂದು ಮಂಜುನಾಥ ಉದ್ಯಾವರ್ ಅವರ ನಿಕಟವರ್ತಿ ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ದಿನೇಶ್ ಪುತ್ರನ್‍ರವರು, ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಯೋಜಿಸಿದ ಮಂಜುನಾಥ ಉದ್ಯಾವರ್ ಅವರ ಎಂಟನೇ ಸಂಸ್ಮರಣಾ ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿ ನುಡಿದರು.
ಮತ್ತೋರ್ವ ಅತಿಥಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ. ನರಸಿಂಹ ಮೂರ್ತಿಯವರು ಮಂಜು ಇಂದಿಗೂ ಕೂಡಾ ಪ್ರಸ್ತುತವಾಗುತ್ತಿರುವುದು ಅವರ ಸಾರ್ವಜನಿಕ ಸೇವೆಗಳಿಂದ. ಅವರು ವೈಯಕ್ತಿಕವಾಗಿ ಯಾರಿಗೂ ಸಹಾಯ ಮಾಡಿದರೆ ಅದು ಮತ್ತೊಬ್ಬನಿಗೆ ಗೊತ್ತಾಗಲಿಕ್ಕಿಲ್ಲ. ಅಂತಹ ಸೇವಾ ಮನೋಭಾವ ಅವರದ್ದು. ಅವರು ಒಂದು ಪಕ್ಷದ ಉನ್ನತ ನಾಯಕರ ಆಪ್ತ ಸಹಾಯಕರಾಗಿದ್ದು ಹಲವಾರು ಮಂದಿಯನ್ನು ಪಕ್ಷದಲ್ಲಿ ಬೆಳೆಸಿದ್ದಾರೆ. ಹಾಗೆ ಬೆಳೆದವರು ಅವರನ್ನು ದೂಷಿಸಿದವರೂ ಇದ್ದಾರೆ ಎಂದು ನೋವಿನಿಂದ ಹೇಳಿದ ಅವರು ಕೆಲವು ಮಂಜುವಿನ ಬದುಕಿನ ಮಾನವೀಯ ಮುಖಗಳನ್ನು ತೆರೆದಿಟ್ಟರು.
ಮಂಜುನಾಥ ಉದ್ಯಾವರ್ ಅವರ ನಿಕಟವರ್ತಿ ಯು. ಅಜಿತ್ ಮೆಂಡನ್‍ರವರು ಭಾವಚಿತ್ರದ ಎದುರು ದೀಪ ಬೆಳಗಿಸಿ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆಯನ್ನು ಕೊಟ್ಟರು. ನಿರ್ದೇಶಕ ಉದ್ಯಾವರ ನಾಗೇಶ್ ಕುಮಾರ್‍ರವರು ಮಂಜುನಾಥ ಉದ್ಯಾವರ್ ಅವರ ಕೆಲವು ನೆನಪುಗಳನ್ನು ಹಂಚಿಕೊಂಡರು.
ವೇದಿಕೆಯಲ್ಲಿ ನಿರ್ದೇಶಕರಾದ ಚಂದ್ರಾವತಿ ಎಸ್. ಭಂಡಾರಿ, ಯು. ಪದ್ಮನಾಭ ಕಾಮತ್ ಉಪಸ್ಥಿತರಿದ್ದರು. ಅಧ್ಯಕ್ಷರಾದ ತಿಲಕ್ ರಾಜ್ ಸಾಲ್ಯಾನ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಗಿರೀಶ್ ಗುಡ್ಡೆಯಂಗಡಿ ವಂದಿಸಿದರು. ಆಬಿದ್ ಆಲಿಯವರು ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸುಗಂಧಿ ಶೇಖರ್, ಸರಳಾ ಎಸ್. ಕೋಟ್ಯಾನ್, ಮಾಜಿ ಉಪಾಧ್ಯಕ್ಷರಾದ ರಿಯಾಜ್ ಪಳ್ಳಿ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಗಿರೀಶ್ ಕುಮಾರ್, ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹರೀಶ್ ಕಿಣಿ ಅಲೆವೂರು, ಉಡುಪಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸದಾಶಿವ ಕಟ್ಟೆಗುಡ್ಡೆ, ಸಂಸ್ಥೆಯ ಕೋಶಾಧಿಕಾರಿ ಸೋಮಶೇಖರ್ ಸುರತ್ಕಲ್, ಮೇರಿ ಡಿ’ಸೋಜಾ, ಹೆಲನ್ ಫೆರ್ನಾಂಡಿಸ್, ಹಮೀದ್ ಸಾಬ್ಜಾನ್, ಪುಂಡರೀಶ್ ಕುಂದರ್, ಭಾಸ್ಕರ್ ಬಂಗೇರಾ, ಶೀಧರ ಗಣೇಶ್ ನಗರ, ಶ್ರೀಧರ ಮಾಬಿಯಾನ್, ಸುಂದರ್ ಸುವರ್ಣ, ಶೇಖರ್ ಕೆ. ಕೋಟ್ಯಾನ್, ಭಾಸ್ಕರ್ ಕೋಟ್ಯಾನ್, ಸತೀಶ್ ಡಿ. ಸಾಲ್ಯಾನ್, ಮಹಮ್ಮದ್ ಆಸಿಫ್, ರವೀಂದ್ರ ಭಂಡಾರಿ, ವಿಶ್ವನಾಥ ಪೂಜಾರಿ, ರಮೇಶ್ ಕುಮಾರ್ ಉದ್ಯಾವರ, ಯು. ಸೀತಾರಾಮ, ಸುಧಾಕರ ಕುಮಾರ್, ಆಶಾ ವಾಸು, ಲಾರೆನ್ಸ್ ಡೇಸಾ, ಪ್ರೇಮ್ ಮಿನೇಜಸ್ ಮೊದಲಾದವರು ಉಪಸ್ಥಿತರಿದ್ದರು.