ಬ್ರಹ್ಮಾವರ: ಜುಗಾರಿ ಅಡ್ಡೆಗೆ ದಾಳಿ 6 ಮಂದಿ ವಶಕ್ಕೆ-ಇಬ್ಬರು ಪರಾರಿ
ಬ್ರಹ್ಮಾವರ ಸೆ.15 (ಉಡುಪಿ ಟೈಮ್ಸ್ ವರದಿ): ತಾಲೂಕಿನ ಯಡ್ತಾಡಿ ಗ್ರಾಮದ ಅಲ್ತಾರು ಎಂಬಲ್ಲಿನ ಹಾಡಿಯಲ್ಲಿ ನಡೆಯುತ್ತಿದ್ದ ಇಸ್ಪೀಟು ಜುಗಾರಿ ಅಡ್ಡೆಗೆ ದಾಳಿ ನಡೆಸಿದ ಬ್ರಹ್ಮಾವರ ಪೊಲೀಸರು 6 ಮಂದಿಯನ್ನು ವಶಕ್ಕೆ ಪಡೆದುಕೊಂಡಿ:ದ್ದಾರೆ.
ರಮೇಶ ಕುಲಾಲ, ಪ್ರಶಾಂತ ಹೆಚ್ ಪೂಜಾರಿ, ಮಂಜುನಾಥ ಪೂಜಾರಿ, ಉಮೇಶ, ಪ್ರವೀಣ್ ಶೆಟ್ಟಿ, ಅಣ್ಣು ಪೂಜಾರಿ ಪೊಲೀಸರು ವಶಕ್ಕೆ ಪಡೆದವರು. ಪೊಲೀಸ್ ದಾಳಿ ವೇಳೆ ನೀಲೇಶ್, ವೆಲೇರಿಯನ್ ಎಂಬ ಇಬ್ಬರು ಪರಾರಿಯಾಗಿದ್ದಾರೆ.
ಯಡ್ತಾಡಿ ಗ್ರಾಮದ ಅಲ್ತಾರು ಎಂಬಲ್ಲಿನ ಹಾಡಿಯಲ್ಲಿ ಕೆಲವರು ಸೇರಿಕೊಂಡು ಇಸ್ಪೀಟು ಜುಗಾರಿ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿ 6 ಮಂದಿಯನ್ನು ವಶಕ್ಕೆ ಪಡೆದು ಅವರಿಂದ ಆಟಕ್ಕೆ ಬಳಸಿದ 3,730 ರೂ. ನಗದು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.