ಮಣಿಪಾಲ: ಗಾಳಹಾಕುತ್ತಿದ್ದ ಕುಂದಾಪುರ ನಿವಾಸಿ ಸಾವು
ಮಣಿಪಾಲ,ಸೆ.15:ಇಲ್ಲಿಯ ಮಣ್ಣಪಳ್ಳ ಕೆರೆಯಲ್ಲಿ ವ್ಯಕ್ತಿಯೊರ್ವರ ಮೃತದೇಹ ಗುರುವಾರ ಕಂಡುಬಂದಿದೆ. ಮಣಿಪಾಲ ಠಾಣಾಧಿಕಾರಿ ರಾಜಶೇಖರ ಹೊಂದಾಳೆ, ಸರ್ಕಲ್ ಇನ್ಸ್ಪೆಕ್ಟರ್ ಮಂಜುನಾಥ್ ಘಟನಾ ಸ್ಥಳದಲ್ಲಿದ್ದು ಮಹಜರು, ಕಾನೂನು ಪ್ರಕ್ರಿಯೆ ನಡೆಸಿದರು.ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಶವವನ್ನು ವೈದ್ಯಕೀಯ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಇಲಾಖೆಗೆ ನೆರವಾದರು.
ಗಾಳಗಾರಿಕೆ ನಡೆಸುತ್ತಿರುವಾಗ ವ್ಯಕ್ತಿ ಆಯಾತಪ್ಪಿ ಕೆರೆಗೆ ಬಿದ್ದು ಮೃತಪಟ್ಟಿರ ಬಹುದೆಂಬ ಶಂಕೆವ್ಯಕ್ತವಾಗಿದೆ. ಸ್ಥಳದಲ್ಲಿ ಗಾಳಗಾರಿಕೆಯ ಪರಿಕರಗಳು ಲಭ್ಯವಾಗಿದೆ.
ಮೃತ ವ್ಯಕ್ತಿಯ ಸ್ವಷ್ಟ ವಿಳಾಸ ತಿಳಿದುಬಂದಿಲ್ಲ.ಕುಂದಾಪುರದ ಪ್ರಕಾಶ್ (35ವ) ಎಂದು ಹೇಳಲಾಗಿದೆ. ಸಂಬಂಧಿಕರು ಮಣಿಪಾಲ ಪೋಲಿಸ್ ಠಾಣೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸಲು ಸೂಚಿಸಲಾಗಿದೆ.