ಉಡುಪಿ ಟೈಮ್ಸ್: ಮುದ್ದುಕೃಷ್ಣ ಹಾಗೂ ಕೃಷ್ಣಬಲ ಚೈತನ್ಯ ಫೋಟೋ ಸ್ಪರ್ಧೆ- 2020

ಉಡುಪಿ :ಉಡುಪಿ ಟೈಮ್ಸ್ ಕನ್ನಡ ವೆಬ್ಸೈಟ್ ಪ್ರಸ್ತುತ ಪಡಿಸುತ್ತಿರುವ ಮುದ್ದು ಕೃಷ್ಣ ಸ್ಪರ್ಧೆ ಹಾಗೂ ಕೃಷ್ಣ ಬಲ ಚೈತನ್ಯ ಫೋಟೋ ಸ್ಪರ್ಧೆ – 2020 ಕಾರ್ಯಕ್ರಮದ ಪೋಸ್ಟರ್ ನ್ನು ಪರ್ಯಾಯ ಪೀಠಾಧೀಶರಾದ ಶ್ರೀ ಈಶ ಪ್ರಿಯ ತೀರ್ಥ ಸ್ವಾಮೀಜಿ ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ‘ಇದೊಂದು ವಿನೂತನ ಪ್ರಯೋಗ. ಕೃಷ್ಣ ಪ್ರಕ್ರತಿಯ ಸಂಕೇತ, ಆತನ ಬಾಲ್ಯವೆಲ್ಲ ಪ್ರಕೃತಿ ನಡುವೆ ಕಳೆದಿದೆ. ಈಗ ಬಂದಿರುವ ಕೊರೋನಾ ಮಹಾ ಮಾರಿಯು ನಾವು ಪ್ರಕೃತಿಯ ಮೇಲೆ ಮಾಡಿದ ನಿರಂತರ ದಾಳಿಯ ಫಲ. ಮಕ್ಕಳಲ್ಲಿ ಪೃಕ್ರತಿಯ ಬಗ್ಗೆ ಆಸಕ್ತಿ ಮೂಡಿಸಲು ಇಂತಹ ಸ್ಪರ್ಧೆ ಸಹಕಾರಿಯಾಗುತ್ತದೆ. ತಂದೆ ತಾಯಿಗಳಿಗೆ ಮುಂದೆ ಆ ಮಕ್ಕಳು ದೊಡ್ಡವರಾದ ಮೇಲೆ ಈ ಫೋಟೋವನ್ನು ತೋರಿಸಿ ಪ್ರಸ್ತುತ ಪರಿಸ್ಥಿಯ ವಿವರಣೆ ನೀಡಲು ಸಾಧ್ಯವಾಗುತ್ತದೆ. ಉಡುಪಿ ಟೈಮ್ಸ್ ನವರ ಈ ಪ್ರಯೋಗ ಅಭಿನಂದನಾರ್ಹ’ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಖ್ಯಾತ ನಿರೂಪಕ ಅವಿನಾಶ್ ಕಾಮತ್ ಮತ್ತು 92.7 ಬಿಗ್ ಎಫ್ ಎಂ ಆರ್ ಜೆ ಏರೋಲ್ ಸ್ಪರ್ಧೆಯ ಆಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಠದ ಮಠದ ಗೋವಿಂದರಾಜ್ ಮತ್ತು ಪ್ರದೀಪ್ ರಾವ್, ಉಡುಪಿ ಟೈಮ್ಸ್ ನ ಸ್ಟೀವನ್ ಡಿಸೋಜ ಉಪಸ್ಥಿತರಿದ್ದರು.

ಕೃಷ್ಣ ಮಠದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸರ್ವರನ್ನು ಉಡುಪಿ ಟೈಮ್ಸ್ ಆಡಳಿತ ಮಂಡಳಿಯ ಉಮೇಶ್ ಮಾರ್ಪಳ್ಳಿ ಸ್ವಾಗತಿಸಿದರೆ, ಸ್ಟೀವನ್ ಕುಲಾಸೊ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ಮಾತುಗಳೊಂದಿಗೆ ಅಕ್ಷತಾ ಗಿರೀಶ್ ಕಾರ್ಯಕ್ರಮ ನಿರೂಪಿಸಿದರು.

ಉಡುಪಿ ಟೈಮ್ಸ್ ಕನ್ನಡ ವೆಬ್ಸೈಟ್ ಪ್ರಸ್ತುತ ಪಡಿಸುತ್ತಿರುವ ಕೆಮ್ಮಲೆ ಗ್ರೂಪ್ ಅರ್ಪಿಸುವ ಮುದ್ದು ಕೃಷ್ಣ ಹಾಗೂ ಕೃಷ್ಣ ಬಲ ಚೈತನ್ಯ ಫೋಟೋ ಸ್ಪರ್ಧೆ2020

ಈ ಸ್ಪರ್ಧೆಯಲ್ಲಿ 2 ವಿಭಾಗವಿದ್ದು, ಮೊದಲನೇ ವಿಭಾಗ ಮುದ್ದು ಕೃಷ್ಣ ಸ್ಪರ್ಧೆ. ನಿಮ್ಮ ಮಗು 2 ವರ್ಷದೊಳಗಿರಬೇಕು. ಕೃಷ್ಣ ವೇಷದ ಸ್ಪಷ್ಟವಾದ 3 ಭಂಗಿಗಳ ಫೋಟೋ ಕಳುಹಿಸತಕ್ಕದ್ದು. ಈ ವಿಭಾಗದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಮತ್ತು 5 ಸಮಾಧಾನಕರ ಬಹುಮಾನಗಳು “ಉಡುಪಿ ಟೈಮ್ಸ್” ನೀಡಲಿದೆ.

ಉಡುಪಿ ಟೈಮ್ಸ್” ವಿಶೇಷ ಪ್ರಯೋಗ ಕೆಮ್ಮಲೆ ಗ್ರೂಪ್ ಅರ್ಪಿಸುವ ಕೃಷ್ಣ ಬಲ ಚೈತನ್ಯ: ಕೃಷ್ಣ ಬಲರಾಮರ ಸಹೋದರತೆ ಧರಣಿಗೆ ಮಾದರಿ. ಕೃಷ್ಣ ಬಲರಾಮನ ರೂಪದಲ್ಲಿ ನಿಮ್ಮ ಮಕ್ಕಳ ಫೋಟೋಗಳನ್ನು ನಮಗೆ ಕಳುಹಿಸಿ. 2 ವರ್ಷದಿಂದ 5 ವರ್ಷದೊಳಗಿನ ಮಕ್ಕಳಿಗೆ ಮಾತ್ರ ಈ ವಿಭಾಗಕ್ಕೆ ಅವಕಾಶ. ಮಕ್ಕಳ ಫೋಟೋಗಳು ಪ್ರಕೃತಿಯ ನಡುವೆ ಕಡ್ಡಾಯವಾಗಿ ಇರತಕ್ಕದ್ದು. ಗಿಡ ನೆಡುವ, ಪರಿಸರದ ನಡುವೆ ಕೃಷ್ಣ ಬಲರಾಮರ ತುಂಟಾಟದ ಫೋಟೋಗಳು. ಹೀಗೆ ಪ್ರಕೃತಿಯ ಜೊತೆಗೆ ಮಕ್ಕಳ ಮುದ್ದಾದ ಫೋಟೋಗಳನ್ನು ನಮಗೆ ಕಳುಹಿಸಿಕೊಡಿ. ಈ ವಿಭಾಗದಲ್ಲಿ ಕಡ್ಡಾಯವಾಗಿ ಇಬ್ಬರಿಗೆ ಭಾಗವಹಿಸುವಿಕೆಗೆ ಅವಕಾಶ. ಈ ವಿಭಾಗದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಮತ್ತು 3 ಆಕರ್ಷಕ ಬಹುಮಾನಗಳ ಕೊಡುಗೆ. ನಿಮ್ಮ ಮಕ್ಕಳ ಮುದ್ದಾದ ಫೋಟೋವನ್ನು ಈ ಕೆಳಗಿನ e-mail ಗೆ ,[email protected] ಸೆಪ್ಟೆಂಬರ್ 13 ರೊಳಗಾಗಿ ಕಳುಹಿಸಬೇಕು. ನಂತರ ಬಂದ ಫೋಟೋಗಳನ್ನು ಪರಿಗಣಿಸಲಾಗುವುದಿಲ್ಲ.. ತೀರ್ಮಾನಕಾರರ ತೀರ್ಮಾನವೇ ಅಂತಿಮ.

ಹೆಚ್ಚಿನ ಮಾಹಿತಿಗಾಗಿ – 9108200488 ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಕರೆ ಮಾಡಬಹುದು. ಸ್ಪರ್ಧೆ ಪ್ರಾಯೋಜಕರಾಗಿ ಫಿಶ್ ಫ್ಯಾಕ್ಟರಿ, ಬೇಕ್ ಸ್ಟುಡಿಯೋ ಒಳಗೊಂಡ ಕೆಮ್ಮಲೆ ಗ್ರೂಪ್ಸ್ , ಗ್ಯಾಲಕ್ಸಿ ಸ್ಪೋರ್ಟ್ಸ್ ವರ್ಲ್ಡ್, ಮದರ್ ಕೇರ್, ಗೀತಾಂಜಲಿ ಸಿಲ್ಕ್ಸ್ ಉಡುಪಿ ವಹಿಸಿಕೊಂಡಿದೆ.

Leave a Reply

Your email address will not be published. Required fields are marked *

error: Content is protected !!